ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಖೈರ್ಲಂಜಿ ಹತ್ಯಾಕಾಂಡ: 6 ಮಂದಿಗೆ ಗಲ್ಲು ಶಿಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖೈರ್ಲಂಜಿ ಹತ್ಯಾಕಾಂಡ: 6 ಮಂದಿಗೆ ಗಲ್ಲು ಶಿಕ್ಷೆ
ಖೈರ್ಲಂಜಿ ದಲಿತ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ನಾಗ್ಪುರದ ತ್ವರಿತಗತಿಯ ನ್ಯಾಯಾಲಯ ಆರು ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದು,ಇಬ್ಬರಿಗೆ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ.

ಖೈರ್ಲಂಜಿ ಹತ್ಯಾಕಾಂಡದ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯ ಎಂಟು ಮಂದಿಯನ್ನು ದೋಷಿತರೆಂದು ತೀರ್ಪು ನೀಡಿ, ಮೂರು ಮಂದಿಯನ್ನು ಖುಲಾಸೆಗೊಳಿಸಿತ್ತು.

2006ರ ಸೆಪ್ಟೆಂಬರ್ 29 ರಂದು ಖೈರ್ಲಂಜಿಯ ದಲಿತ ಕುಟುಂಬದ ಮಹಿಳೆ ಮತ್ತು ಮೂರು ಮಕ್ಕಳನ್ನು ಅಮಾನುಷವಾಗಿ ಹತ್ಯೆಗೈಯಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರದ ಎಸ್.ಎಸ್.ಕಾಸ್ಸ್ ಅವರು, ಗೋಪಾಲ್ ಬಿನ್‌ಜೆವಾರ್, ಸಾಕ್ರೂ ಬಿನ್‌ಜೆವಾರ್, ಶತ್ರುಘ್ನ ಧಾಂಡೆ, ವಿಶ್ವನಾಥ್ ಧಾಂಡೆ, ರಾಮು ಧಾಂಡೆ, ಜಗದೀಶ್ ಮಂಡ್ಲೆಕರ್, ಪ್ರಭಾಕರ್ ಮಂಡ್ಲೆಕರ್ ಮತ್ತು ಶಿಶ್‌ಪಾಲ್ ಧಾಂಡೆಯನ್ನು ದೋಷಿತರೆಂದು ತೀರ್ಪು ನೀಡಿದ್ದರು.

ಮಹೀಪಾಲ್ ಧಾಂಡೆ,ಧರ್ಮಪಾಲ್ ಧಾಂಡೆ ಮತ್ತು ಪುರುಷೋತ್ತಮ್ ತಿತರ್‌ಮಾರೆ ಸೇರಿದಂತೆ ಮೂವರನ್ನು ದೋಷಮುಕ್ತಗೊಳಿಸಲಾಗಿತ್ತು.

ಅವರ ಪುತ್ರಿ ಪ್ರಿಯಾಂಕಳನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಸುರೇಖ ಅವರನ್ನು ಗುಂಪೊಂದು ಎಳೆದುಕೊಂಡು ಹೋಗಿ ಬೆತ್ತಲೆಮಾಡಿ, ಕೋಲುಗಳಿಂದ ಮತ್ತು ಬೈಸಿಕಲ್ ಚೈನ್‌ಗಳಿಂದ ಥಳಿಸಿದರೆಂದು ಹೇಳಲಾಗಿದೆ. ಆಕೆಯ ತಲೆಯನ್ನು ಮತ್ತೆ ಮತ್ತೆ ಗೋಡೆಗೆ ಜಜ್ಜಿದಾಗ ಆಕೆ ಸಾವನ್ನಪ್ಪಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.

ಬಳಿಕ ಸುರೇಖರ 17 ವರ್ಷ ಪ್ರಾಯದ ಪ್ರಿಯಾಂಕ ಮೇಲೆ ಗುಂಪಿನ ಆಕ್ರೋಶ ತಿರುಗಿತು. ದನದಕೊಟ್ಟಿಗೆಯಲ್ಲಿ ಅಡಗಿದ್ದ ಪ್ರಿಯಾಂಕಳನ್ನು ಹೊರಗೆಳೆದು ಮಾರಣಾಂತಿಕವಾಗಿ ಥಳಿಸಿದ್ದರಿಂದ ಆಕೆ ಸತ್ತಳೆಂದು ಆರೋಪಿಸಲಾಗಿದೆ. ಅವರ ಇಬ್ಬರು ಸೋದರರನ್ನು ಅವರೊಬ್ಬ ಕುರುಡನಾಗಿದ್ದರೂ ದುಷ್ಕರ್ಮಿಗಳು ಬಿಡದೆ ಥಳಿಸಿ ಹತ್ಯೆಗೈದಿದ್ದರು.
ಮತ್ತಷ್ಟು
ಕಂಧಮಲ್ ಮತ್ತೆ ಹಿಂಸೆ: ಗೋಲಿಬಾರ್‌ಗೆ ಓರ್ವ ಬಲಿ
ದೆಹಲಿ ಸ್ಫೋಟದ ಉಗ್ರರಿಗೆ ದುಬೈ ನಂಟು
ಸ್ಫೋಟ:ಉಗ್ರ ಅತಿಫ್ ಖಾತೆಯಲ್ಲಿ 3ಕೋಟಿ !
ನೋಯ್ಡಾ ಸಿಇಒ ಹತ್ಯೆ ಪ್ರಕರಣ:136 ಮಂದಿ ಬಂಧನ
ಕೋಲ್ಕತಾ: ಸ್ಫೋಟಕ ತುಂಬಿದ್ದ ಬ್ಯಾಗ್ ಪತ್ತೆ
ಯುಪಿ,ಒರಿಸ್ಸಾ ಮಳೆಗೆ ತತ್ತರ:ಮೃತರ ಸಂಖ್ಯೆ 163ಕ್ಕೆ