ದೇಶದಲ್ಲಿನ ಹಣದುಬ್ಬರ ಒಂದೇ ಸಮನೆ ಏರುತ್ತಿದ್ದರೆ,ಶೇರುಪೇಟೆ ಹಾವು-ಏಣಿಯಾಟದಲ್ಲಿದ್ದರೆ, ಮತ್ತೊಂದು ಭಾರತ ಅತೀ ಹೆಚ್ಚು ಭ್ರಷ್ಟಾಚಾರ ಎಸಗಿದ ರಾಷ್ಟ್ರದ ಪಟ್ಟಿಯಲ್ಲಿ 85ನೇ ಸ್ಥಾನ ಪಡೆದಿದೆ.ಅಂತಾರಾಷ್ಟ್ರೀಯ ಮಟ್ಟದ ಭ್ರಷ್ಟಾಚಾರ ಸಂವೇದಿ ಸೂಚ್ಯಂಕದ ಪ್ರಕಾರ ಭ್ರಷ್ಟಾಚಾರದಲ್ಲಿ ಭಾರತ 85ನೇ ಸ್ಥಾನ ಗಳಿಸಿದ್ದು, ಕಳೆದ ವರ್ಷ ಬಿಡುಗಡೆಗೊಂಡ ವರದಿಯಲ್ಲಿ ಭಾರತ 72ನೇ ಸ್ಥಾನ ಪಡೆದಿತ್ತು.180ದೇಶಗಳ ಪಟ್ಟಿಯಲ್ಲಿ ಭಾರತ 85ನೇ ಸ್ಥಾನಗಳಿಸುವ ಮೂಲಕ, ಭ್ರಷ್ಟಾಚಾರದಲ್ಲೂ ಭಾರತ ತನ್ನ ಸ್ಥಾನವನ್ನು ಮೇಲಕ್ಕೊಯ್ಯತೊಡಗಿದೆ. ಸಂಸತ್‌ನಲ್ಲಿ ವೋಟಿಗಾಗಿ ಲಂಚಹಗರಣದ ನಂತರ ಭಾರತ