ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಳಿನಿಗೆ ಬಂಧಮುಕ್ತಿ ನೀಡಲು ಮದ್ರಾಸ್ ಹೈಕೋರ್ಟ್ ಸೂಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಳಿನಿಗೆ ಬಂಧಮುಕ್ತಿ ನೀಡಲು ಮದ್ರಾಸ್ ಹೈಕೋರ್ಟ್ ಸೂಚನೆ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವಳಾದ ನಳಿನಿ ಶ್ರೀಹರನ್ ಶೀಘ್ರ ಬಿಡುಗಡೆಗೆ ತಮಿಳುನಾಡು ಸರ್ಕಾರ ಅನುಮತಿ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.

ನಳಿನಿ ಬಿಡುಗಡೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲಹಾ ಸಮಿತಿಯನ್ನು ಪುನರ್‌‌ನೇಮಕ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ನಳಿನಿ ಈಗಾಗಲೇ ವೆಲ್ಲೂರು ಜೈಲಿನಲ್ಲಿ 17ವರ್ಷ ಕಾಲ ಶಿಕ್ಷೆ ಅನುಭವಿಸಿದ್ದಾಳೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ನಳಿನಿ ಮುರುಗನ್ ಶ್ರೀಹರನ್ ಅವಧಿಗಿಂತ ಮುಂಚಿತವಾಗಿ ಬಿಡುಗಡೆ ಮಾಡಬೇಕೆಂದು ಕೋರಿ ಮೇ ತಿಂಗಳಿನಲ್ಲಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇತ್ತೀಚೆಗಷ್ಟೇ ರಾಜೀವ್ ಪುತ್ರಿ ಪ್ರಿಯಾಂಕ ಗಾಂಧಿ ವೆಲ್ಲೂರ್ ಜೈಲಿಗೆ ಭೇಟಿ ನೀಡಿ, ತಂದೆಯ ಹಂತಕಿ ನಳಿಯೊಂದಿಗೆ ಮಾತುಕತೆ ನಡೆಸಿದ ಬಳಿಕ, ನಳಿನಿಯ ಶೀಘ್ರ ಬಿಡುಗಡೆ ಮಹತ್ವ ಪಡೆದುಕೊಂಡಿದೆ.

ನಳಿನಿ ಪ್ರಕರಣದ ಕುರಿತು ಮದ್ರಾಸ್ ಹೈಕೋರ್ಟ್ ಇಂದು ನೀಡಿರುವ ತೀರ್ಪು ರಾಜ್ಯ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ. ನಳಿನಿಯನ್ನು ಶೀಘ್ರ ಬಿಡುಗಡೆ ಮಾಡಬಾರದು ಎಂಬುದಾಗಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿ, ಆಕೆ ಪೂರ್ಣಾವಧಿಯ ಶಿಕ್ಷೆಯನ್ನು ಅನುಭವಿಸಿದ ನಂತರವೇ ಬಿಡುಗಡೆ ಹೊಂದಬೇಕು ಎಂದು ವಾದಿಸಿತ್ತು.

ರಾಜೀವ್ ಗಾಂಧಿ ಹತ್ಯಾ ಪ್ರಕರಣದಲ್ಲಿ ನಳಿನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು,ತುಂಬು ಗರ್ಭಿಣಿಯಾಗಿದ್ದ ನಳಿನಿ ಮಗುವನ್ನು ಜೈಲಿನಲ್ಲಿಯೇ ಹಡೆಯಲು ಅನುವು ಮಾಡುವಂತೆ ಕೋರಿ, ಸೋನಿಯಾಗಾಂಧಿ ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ನಂತರ ನಳಿನಿ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗಿತ್ತು.
ಮತ್ತಷ್ಟು
ಭ್ರಷ್ಟಾಚಾರದಲ್ಲಿ ಭಾರತಕ್ಕೆ 85ನೆ ಸ್ಥಾನ !
ಸಿಇಒ ಹತ್ಯೆ ಪ್ರಕರಣ: ಕ್ಷಮೆ ಕೇಳಿದ ಆಸ್ಕರ್
ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ಬೇಕು:ರಾಹುಲ್
ಖೈರ್ಲಂಜಿ ಹತ್ಯಾಕಾಂಡ: 6 ಮಂದಿಗೆ ಗಲ್ಲು ಶಿಕ್ಷೆ
ಕಂಧಮಲ್ ಮತ್ತೆ ಹಿಂಸೆ: ಗೋಲಿಬಾರ್‌ಗೆ ಓರ್ವ ಬಲಿ
ದೆಹಲಿ ಸ್ಫೋಟದ ಉಗ್ರರಿಗೆ ದುಬೈ ನಂಟು