ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಾರ್ಖಂಡ್ : ರೈಲ್ವೇ ಟ್ರಾಕ್‌ನಲ್ಲಿ 14 ಬಾಂಬ್ ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾರ್ಖಂಡ್ : ರೈಲ್ವೇ ಟ್ರಾಕ್‌ನಲ್ಲಿ 14 ಬಾಂಬ್ ಪತ್ತೆ
ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯ ತಾಲ್ಜ್‌ಹರಿ ರೈಲ್ವೇ ಸ್ಟೇಷನ್‌ನ ಭಾಗಲ್‌ಪುರ್-ಬಾರ್ಹಾರ್ವಾ ಸೆಕ್ಷನ್‌ ಟ್ರ್ಯಾಕ್‌ನಿಂದ ನಿನ್ನೆ 14 ಸಜೀವ ಬಾಂಬ್ ಪತ್ತೆ ಹಚ್ಚುವ ಮೂಲಕ ಸಲ್ಪದರಲ್ಲೇ ದೊಡ್ಡ ರೈಲ್ವೇ ದುರಂತವೊಂದು ತಪ್ಪಿಹೋದಂತಾಗಿದೆ.

ಆ ಟ್ರ್ಯಾಕ್ ಮೂಲಕ ಉತ್ತರಪ್ರದೇಶ ಗುವಾಹಟಿ-ದಾದರ್ ಮತ್ತು ಮಾಲ್ಡಾ-ಭಿವಾನಿ ಫರ್ರಾಕ್ ಎಕ್ಸ್‌ಪ್ರೆಸ್ ರೈಲುಗಳು ಓಡಬೇಕಿತ್ತು ಎಂದು ರೈಲ್ವೇ ಮೂಲಗಳು ತಿಳಿಸಿವೆ.

ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಲಾಗಿದ್ದ ಬಾಂಬ್‌ಗಳು ಸ್ಥಳೀಯವಾಗಿಯೇ ತಯಾರಾದಂತಿತ್ತು ಎಂದು ಪೋಲೀಸ್ ಸೂಪರಿಟೆಂಡೆಂಟ್ ಪಿ.ಆರ್.ದಾಸ್ ಹೇಳಿದ್ದಾರೆ.

ಇದು ಸ್ಥಳೀಯರಿಗೆ ಬಾಂಬ್ ಕುರಿತು ಅನಗತ್ಯ ಭೀತಿ ಹುಟ್ಟಿಸಲು ಮಾಡಿದ ನಾಟಕವಿದ್ದರೂ ಇರಬಹುದು ಎಂದು ಅವರು ಸಂಶಯಿಸಿದ್ದಾರೆ.

ಹುಸಿ ಬಾಂಬ್ ಆಗಿತ್ತೇ ಎಂಬುದಾಗಿಯೂ ಸೇರಿದಂತೆ ಪ್ರಕರಣದ ಕುರಿತು ಕೂಲಂಕುಷವಾಗಿ ತನಿಖೆ ಇನ್ನಷ್ಟೇ ನಡೆಯಬೇಕಿದೆ.
ಮತ್ತಷ್ಟು
ಮುಂಬೈ:ಇಂಡಿಯನ್ ಮುಜಾಹಿದ್ದೀನ್‌ನ 5 ಉಗ್ರರ ಸೆರೆ
ನಳಿನಿಗೆ ಬಂಧಮುಕ್ತಿ ನೀಡಲು ಮದ್ರಾಸ್ ಹೈಕೋರ್ಟ್ ಸೂಚನೆ
ಭ್ರಷ್ಟಾಚಾರದಲ್ಲಿ ಭಾರತಕ್ಕೆ 85ನೆ ಸ್ಥಾನ !
ಸಿಇಒ ಹತ್ಯೆ ಪ್ರಕರಣ: ಕ್ಷಮೆ ಕೇಳಿದ ಆಸ್ಕರ್
ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ಬೇಕು:ರಾಹುಲ್
ಖೈರ್ಲಂಜಿ ಹತ್ಯಾಕಾಂಡ: 6 ಮಂದಿಗೆ ಗಲ್ಲು ಶಿಕ್ಷೆ