ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರರ ಸ್ವರ್ಗವಾಗುತ್ತಿದೆಯೇಕೆ ಕರ್ನಾಟಕ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ಸ್ವರ್ಗವಾಗುತ್ತಿದೆಯೇಕೆ ಕರ್ನಾಟಕ ?
ದೆಹಲಿ, ಅಹಮದಾಬಾದ್ ಮುಂತಾದೆಡೆ ಇತ್ತೀಚೆಗೆ ನಡೆದ ಸರಣಿ ಬಾಂಬ್ ಸ್ಫೋಟಗಳಿಗೆ ಕರ್ನಾಟಕದಿಂದಲೇ ಸ್ಫೋಟಕಗಳ ಪೂರೈಕೆಯಾಗುತ್ತಿತ್ತು ಎಂಬ ಆಘಾತಕಾರಿ ಅಂಶವೊಂದು ಬಯಲಾದ ಬೆನ್ನಲ್ಲೇ, ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಶಂಕಿಸಲಾಗಿರುವ, ಇಂಡಿಯನ್ ಮುಜಾಹಿದೀನ್ ಬಣದ ಸ್ಥಾಪಕ ಸದಸ್ಯ ಕೂಡ ಕರ್ನಾಟಕದವನೇ ಎಂಬ ಸಂಗತಿಯೂ ಹೊರಬಿದ್ದಿದ್ದು, ರಾಜ್ಯವು ಉಗ್ರರ ಸ್ವರ್ಗವಾಗುತ್ತಿದೆ ಎಂಬ ವಾದಕ್ಕೆ ಪುಷ್ಟಿ ನೀಡುತ್ತದೆ.

ಮೊಹಮದ್ ಸಾದಿಕ್ ಶೇಖ್, ಅಹ್ಮದ್ ಶೇಖ್, ಆರಿಫ್ ಬದ್ರ್ ಶೇಖ್, ಮೊಹಮದ್ ಅಫ್ಜಲ್ ಉಸ್ಮಾನಿ ಮತ್ತು ಮೊಹಮದ್ ಜಕ್ರಿ ಎಂಬ ಐವರ ಬಂಧನದಿಂದ ಮುಂಬಯಿಯಲ್ಲಿ ಮತ್ತೊಂದು ಸರಣಿ ಬಾಂಬ್ ಸ್ಫೋಟವನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಇಂಡಿಯನ್ ಮುಜಾಹಿದೀನ್ ಸ್ಥಾಪಕ ಸದಸ್ಯ, ಕರ್ನಾಟಕದವನಾದ ರೋಶನ್ ಖಾನ್ ಈಗ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದೂ ಹೇಳಿದ್ದಾರೆ. ರೋಶನ್ ಖಾನ್, ಹೈದರಾಬಾದ್, ಮಹಾರಾಷ್ಟ್ರ, ದೆಹಲಿ ಮತ್ತು ಗುಜರಾತ್‌ಗಳಲ್ಲಿ ಸಕ್ರಿಯನಾಗಿದ್ದ ಎಂದವರು ಹೇಳಿದ್ದಾರೆ. ಮೊಹಮದ್ ಸಾದಿಕ್ ಶೇಖ್ ಕೂಡ ಇಂಡಿಯನ್ ಮುಜಾಹಿದೀನ್ ಸ್ಥಾಪಕ ಸದಸ್ಯನೇ ಆಗಿದ್ದಾನೆ. ಈ ಐವರು ಕೂಡ ಹಿಂದೆ 'ಸಿಮಿ'ಯಲ್ಲಿದ್ದು, ಬಳಿಕ ಅದರದ್ದೇ ಬಣವಾದ ಇಂಡಿಯನ್ ಮುಜಾಹಿದೀನ್ ಸೇರಿಕೊಂಡಿದ್ದರು.

ಇವರೆಲ್ಲರೂ, 2005ರಿಂದೀಚೆಗೆ ವಾರಾಣಸಿಯ ಸಂಕಟಮೋಚನ ಮಂದಿರ ಸ್ಫೋಟ, ಲಖ್ನೋ ಮತ್ತು ಫೈಜಾಬಾದ್ ನ್ಯಾಯಾಲಯ ಆವರಣದಲ್ಲಿ ಸ್ಫೋಟ, ಹೈದರಾಬಾದ್, ಬೆಂಗಳೂರು, ಜೈಪುರ, ಮುಂಬಯಿಗಳಲ್ಲಿ ಸಂಭವಿಸಿದ ಸರಣಿ ಸ್ಫೋಟ ಮತ್ತು ಸೂರತ್‌ನಲ್ಲಿ ಬಾಂಬ್ ಇರಿಸಿದ್ದ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ಬಂಧಿತ ಐವರಿಗೆ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಮತ್ತು ಲಷ್ಕರ್ ಇ ತೊಯ್ಬಾ ಸಂಪರ್ಕಗಳಿರುವ ಕುರಿತೂ ತನಿಖೆ ನಡೆಸಲಾಗುತ್ತಿದೆ.

ಬಂಧಿತರಲ್ಲಿ ಮೂವರು ಪಾಕಿಸ್ತಾನದಲ್ಲಿ ತರಬೇತಿಗೆ ತೆರಳಿದ್ದರು. ಸ್ಫೋಟಕ ಹಾಗೂ ಇತರ ಶಸ್ತ್ರಾಸ್ತ್ರಗಳಿಗೆ ಹಣವು ಹವಾಲಾ ಜಾಲದ ಮೂಲಕ ಬರುತ್ತಿತ್ತು.
ಮತ್ತಷ್ಟು
ಮಧುರೈ ಮೀನಾಕ್ಷಿ ಲಷ್ಕರ್ ಟಾರ್ಗೆಟ್ - ತ.ನಾ ಕಟ್ಟೆಚ್ಚರ
ಜಾರ್ಖಂಡ್ : ರೈಲ್ವೇ ಟ್ರಾಕ್‌ನಲ್ಲಿ 14 ಬಾಂಬ್ ಪತ್ತೆ
ಮುಂಬೈ:ಇಂಡಿಯನ್ ಮುಜಾಹಿದ್ದೀನ್‌ನ 5 ಉಗ್ರರ ಸೆರೆ
ನಳಿನಿಗೆ ಬಂಧಮುಕ್ತಿ ನೀಡಲು ಮದ್ರಾಸ್ ಹೈಕೋರ್ಟ್ ಸೂಚನೆ
ಭ್ರಷ್ಟಾಚಾರದಲ್ಲಿ ಭಾರತಕ್ಕೆ 85ನೆ ಸ್ಥಾನ !
ಸಿಇಒ ಹತ್ಯೆ ಪ್ರಕರಣ: ಕ್ಷಮೆ ಕೇಳಿದ ಆಸ್ಕರ್