ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒರಿಸ್ಸಾ ಭುಗಿಲೆದ್ದ ಹಿಂಸಾಚಾರಕ್ಕೆ 60ಮನೆ ಭಸ್ಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ ಭುಗಿಲೆದ್ದ ಹಿಂಸಾಚಾರಕ್ಕೆ 60ಮನೆ ಭಸ್ಮ
PTI
ಒರಿಸ್ಸಾದ ಕಂಧಮಲ್‌ನಲ್ಲಿ ಗುರುವಾರ ಹಿಂಸಾಚಾರ ಉಲ್ಬಣಗೊಂಡಿದ್ದು, ಕ್ರೈಸ್ತ ಸಮುದಾಯದ ಸುಮಾರು 60ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಮತ್ತು ನಾಗರಿಕರ ನಡುವೆ ಘರ್ಷಣೆ ಮುಂದುವರಿದ್ದು ರಸ್ತೆ ಸಂಚಾರಕ್ಕೆ ತಡೆಯೊಡ್ಡಿರುವುದಾಗಿ ಹೇಳಿದ್ದಾರೆ. ಬುಧವಾರ ರಾತ್ರಿ ಒಂದು ಸಮುದಾಯದ ಗುಂಪು ಮತ್ತೊಂದು ಕೋಮಿನ ಮನೆಗಳಿಗೆ ಬೆಂಕಿ ಹಚ್ಚಲು ಯತ್ನಿಸಲು ಮುಂದಾದಾಗ ಪೊಲೀಸರು ಅದನ್ನು ತಡೆದ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಬುಧವಾರ ರಾತ್ರಿ ಉದ್ರಿಕ್ತಗೊಂಡ ಆದಿವಾಸಿ ಗುಂಪು ದಾರಿಂಗ್‌ಬಾಡಿ ಬ್ಲಾಕ್‌ನಲ್ಲಿರುವ ಕ್ರೈಸ್ತ ಸಮುದಾಯದ ಮನೆಗಳಿಗೆ ಬೆಂಕಿ ಹಚ್ಚುವುದನ್ನು ಪೊಲೀಸ್ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತಡೆಯೊಡ್ಡಿದ್ದರು, ಆದರೂ 60ಕ್ಕೂ ಅಧಿಕ ಮನೆಗಳು ಬೆಂಕಿಗಾಹುತಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಈ ಪ್ರದೇಶದಾದ್ಯಂತ ಪರಿಸ್ಥಿತಿ ಉದ್ನಿಗ್ನಗೊಂಡಿರುವುದಾಗಿ ಜಿಲ್ಲಾಧಿಕಾರಿ ಕೃಷ್ಣಕುಮಾರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. ದಾರಿಂಗ್‌ಬಾಡಿ ಬ್ಲಾಕ್‌ನಲ್ಲಿರುವ ಮನೆ ,ಚರ್ಚ್ ಸೇರಿದಂತೆ ಪ್ರಾರ್ಥನಾ ಮಂದಿರಗಳಿಗೆ ಬೆಂಕಿ ಹಚ್ಚಿರುವುದಾಗಿ ಒರಿಯಾ ದೈನಿಕ ಸಾಂಬಾದ್ ವರದಿ ಬಹಿರಂಗಪಡಿಸಿದೆ.

ನಿನ್ನೆಯಷ್ಟೇ ಆದಿವಾಸಿ ಮಹಿಳೆಯರು ಬಂಧಿತ ಆದಿವಾಸಿ ಜನಾಂಗದ ಇಬ್ಬರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಇಲ್ಲಿನ ರಾಯ್‌ಕಿಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಓರ್ವ ವ್ಯಕ್ತಿ ಬಲಿಯಾಗಿದ್ದ.
ಮತ್ತಷ್ಟು
ಉಗ್ರರ ಸ್ವರ್ಗವಾಗುತ್ತಿದೆಯೇಕೆ ಕರ್ನಾಟಕ ?
ಮಧುರೈ ಮೀನಾಕ್ಷಿ ಲಷ್ಕರ್ ಟಾರ್ಗೆಟ್ - ತ.ನಾ ಕಟ್ಟೆಚ್ಚರ
ಜಾರ್ಖಂಡ್ : ರೈಲ್ವೇ ಟ್ರಾಕ್‌ನಲ್ಲಿ 14 ಬಾಂಬ್ ಪತ್ತೆ
ಮುಂಬೈ:ಇಂಡಿಯನ್ ಮುಜಾಹಿದ್ದೀನ್‌ನ 5 ಉಗ್ರರ ಸೆರೆ
ನಳಿನಿಗೆ ಬಂಧಮುಕ್ತಿ ನೀಡಲು ಮದ್ರಾಸ್ ಹೈಕೋರ್ಟ್ ಸೂಚನೆ
ಭ್ರಷ್ಟಾಚಾರದಲ್ಲಿ ಭಾರತಕ್ಕೆ 85ನೆ ಸ್ಥಾನ !