ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜ್ ಠಾಕ್ರೆ ವಿರುದ್ಧ ಕ್ರಮಕೈಗೊಳ್ಳಿ: ಬೊ.ಹೈಕೋರ್ಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ ಠಾಕ್ರೆ ವಿರುದ್ಧ ಕ್ರಮಕೈಗೊಳ್ಳಿ: ಬೊ.ಹೈಕೋರ್ಟ್
ಮರಾಠಿಗರ ಹೆಸರಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡುತ್ತ ಕಾನೂನನ್ನು ಕೈಗೆತ್ತಿಕೊಂಡ ಮಹಾರಾಷ್ಟ್ರ ನವನಿರ್ಮಾಣ್ ಸೇನೆ (ಎಂಎನ್‌ಎಸ್)ಯ ವರಿಷ್ಠ ರಾಜ್ ಠಾಕ್ರೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳದ ಮಹಾರಾಷ್ಟ್ರ ಸರ್ಕಾರಕ್ಕೆ ಗುರುವಾರ ಬೊಂಬಾಯ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಮರಾಠಿ ಹೆಸರಿನಲ್ಲಿ ಗೂಂಡಾಗಳಂತೆ ವರ್ತಿಸುತ್ತಿರುವ ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ ಎಲ್ಲಾ ಮುಖಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಎಂಎನ್‌ಎಸ್ ವರಿಷ್ಠ ರಾಜ್ ಠಾಕ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಕ್ಟೋಬರ್ 16 ರವರೆಗೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಗಡುವು ವಿಧಿಸಿದೆ.

ಈ ನಿಟ್ಟಿನಲ್ಲಿ ಮರಾಠಿಯ ಹೆಸರಿನಲ್ಲಿ ಸಾರ್ವಜನಿಕವಾಗಿ ಭಯೋತ್ಪಾದನೆ ಹುಟ್ಟಿಸುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಖಾರವಾಗಿ ಪ್ರಶ್ನಿಸಿದ್ದು, ಕಾನೂನುನ್ನು ಕೈಗೆತ್ತಿಕೊಂಡು ದುಂಡಾವರ್ತನೆ ಮಾಡಲು ಅಂತವರಿಗೆ ಮುಕ್ತ ಅವಕಾಶ ನೀಡಿದ್ದಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ.

ಮರಾಠಿ ಮತ್ತು ಮರಾಠಿಯೇತರರ ಹೆಸರಿನಲ್ಲಿ ಕಿಡಿಕಾರುತ್ತಿರುವ ರಾಜ್ ಠಾಕ್ರೆ ನಗರದಲ್ಲಿ ಎಲ್ಲಾ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ನಾಮಫಲಕವನ್ನು ಮರಾಠಿಯಲ್ಲಿಯೇ ಹಾಕಬೇಕು ಎಂಬುದಾಗಿ ಇತ್ತೀಚೆಗೆ ಫರ್ಮಾನು ಹೊರಡಿಸಿದ್ದರು.
ಮತ್ತಷ್ಟು
ಒರಿಸ್ಸಾ ಭುಗಿಲೆದ್ದ ಹಿಂಸಾಚಾರಕ್ಕೆ 60ಮನೆ ಭಸ್ಮ
ಉಗ್ರರ ಸ್ವರ್ಗವಾಗುತ್ತಿದೆಯೇಕೆ ಕರ್ನಾಟಕ ?
ಮಧುರೈ ಮೀನಾಕ್ಷಿ ಲಷ್ಕರ್ ಟಾರ್ಗೆಟ್ - ತ.ನಾ ಕಟ್ಟೆಚ್ಚರ
ಜಾರ್ಖಂಡ್ : ರೈಲ್ವೇ ಟ್ರಾಕ್‌ನಲ್ಲಿ 14 ಬಾಂಬ್ ಪತ್ತೆ
ಮುಂಬೈ:ಇಂಡಿಯನ್ ಮುಜಾಹಿದ್ದೀನ್‌ನ 5 ಉಗ್ರರ ಸೆರೆ
ನಳಿನಿಗೆ ಬಂಧಮುಕ್ತಿ ನೀಡಲು ಮದ್ರಾಸ್ ಹೈಕೋರ್ಟ್ ಸೂಚನೆ