ಎರಡು ಕೈ ಸೇರಿದರೆ ಚಪ್ಪಾಳೆ ಎಂಬ ನಾಣ್ಣುಡಿಯೇ ಇದೆ. ಒಗ್ಗಟ್ಟಿನಲ್ಲಿ ಬಲವಿದೆ, ಎಲ್ಲರೂ ಒಂದುಗೂಡಿ ಕಾರ್ಯ ಮಾಡಿದರೆ ಕೆಲಸ ಸಿದ್ಧಿಸುತ್ತದೆ ಎಂಬುದು ಇದರ ಮರ್ಮ. ಆದರೆ ಒಂದೇ ಕೈಯಿಂದ ಚಪ್ಪಾಳೆ ಹೊಡೆಯಬಹುದೂಂತ ಕೇಳಿದ್ದೀರಾ? ಇಲ್ಲವಾದಲ್ಲಿ, ಇದೋ ಇಲ್ಲಿದೆ ಒಂದು ಕೈಯಿಂದಲೇ ಚಪ್ಪಾಳೆ ಹೊಡೆಯಬಲ್ಲ, ಮತ್ತು ಇದರಿಂದಾಗಿಯೇ ಗಿನ್ನೆಸ್ ದಾಖಲೆ ಸ್ಥಾಪಿಸಿದ ವ್ಯಕ್ತಿಯ ಪ್ರವರ.
ಈ ಅಸಾಧ್ಯ ಕಾರ್ಯವನ್ನು ಸಾಧ್ಯವಾಗಿಸಿದವರು ಭೋಪಾಲದ ಯುವಕ ನವೇದ್ ಖಾನ್. ಚಾಲೆಂಜರ್ ಅಕಾಡೆಮಿಯು ಚೆನ್ನೈಯಲ್ಲಿ ಆಯೋಜಿಸಿದ್ದ ವಿಶ್ವಕಪ್-2008 ಕೂಟದಲ್ಲಿ ವಿಜೇತರಾಗಿ ಮರಳಿ, ಬುಧವಾರ ಪತ್ರಕರ್ತರೆದುರು ತಮ್ಮ ಈ ಸಾಧನೆಯನ್ನು ಪ್ರದರ್ಶಿಸಿದ ನವೇದ್ ಖಾನ್, ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆದು ನೆರೆದಿದ್ದವರನ್ನು ಮಂತ್ರಮುಗ್ಧರಾಗಿಸಿದರು.
310 ಬಾರಿ ಚಪ್ಪಾಳೆ ಹೊಡೆದು ವಿಶ್ವ ದಾಖಲೆ ಮುರಿದಿರುವುದಾಗಿ ಹೇಳಿಕೊಂಡಿರುವ ಅವರು, ಹಿಸ್ಸಾರ್‌ನ ನವನೀತ್ ಸಿಂಗ್ (284 ಬಾರಿ) ಸ್ಥಾಪಿಸಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
|