ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪೆಟ್ರೋಲ್‌ನಿಂದ ಬೋಗಿಗೆ ಬೆಂಕಿ ಹಿಡಿದಿಲ್ಲ:ಬ್ಯಾನರ್ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೆಟ್ರೋಲ್‌ನಿಂದ ಬೋಗಿಗೆ ಬೆಂಕಿ ಹಿಡಿದಿಲ್ಲ:ಬ್ಯಾನರ್ಜಿ
ನವದೆಹಲಿ:ಗೋದ್ರಾ ಸಾಬರ್‌ಮತಿ ಎಕ್ಸ್‌ಪ್ರೆಸ್ ಅಗ್ನಿ ದುರಂತ ಪ್ರಕರಣದ ತನಿಖೆ ನಡೆಸಿದ ನಾನಾವತಿ ಆಯೋಗ ಇದೊಂದು ವ್ಯವಸ್ಥಿತ ಸಂಚು ಎಂದು ತಿಳಿಸಿದ ಬೆನ್ನಲ್ಲೇ,ಈ ಮೊದಲು ತನಿಖೆ ನಡೆಸಿದ ನ್ಯಾಯಮೂರ್ತಿ ಯು ಬ್ಯಾನರ್ಜಿ, ಇದೊಂದು ಆಕಸ್ಮಿಕ ಘಟನೆ ಎಂದು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಪೆಟ್ರೋಲ್‌ನಿಂದ ಬೋಗಿಗೆ ಬೆಂಕಿ ಹಿಡಿದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ನೇತೃತ್ವದಲ್ಲಿ ಸಾಬರ್‌ಬತಿ ದುರಂತದ ತನಿಖೆಗೆ ಯು ಬ್ಯಾನರ್ಜಿ ಆಯೋಗವನ್ನು 2004ರಲ್ಲಿ ನೇಮಕಗೊಳಿಸಲಾಗಿತ್ತು.ಅದರ ವರದಿಯನ್ನು 2005ರಲ್ಲಿ ಸಲ್ಲಿಸಿದ್ದರು.

2002ರ ಫೆ.27ರಂದು ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಎಸ್.6 ಬೋಗಿ ಅಗ್ನಿ ದುರಂತವೊಂದು ಆಕಸ್ಮಿಕ ಘಟನೆ ಎಂದು ಬ್ಯಾನರ್ಜಿ ಆಯೋಗ ತಿಳಿಸಿತ್ತು.

ನಾನು ನನ್ನ ತನಿಖೆಯ ವೇಳೆ ಇದನ್ನು ಖಚಿತಪಡಿಸಿಕೊಂಡಿದ್ದು, ಇದೊಂದು ಆಕಸ್ಮಿಕ ಘಟನೆ ವಿನಃ ವ್ಯವಸ್ಥಿತ ಸಂಚು ಅಲ್ಲ ಎಂಬುದಾಗಿ ಹೇಳಿದ್ದಾರೆ. ಗುಜರಾತ್ ಅಸೆಂಬ್ಲಿಯಲ್ಲಿ ಗುರುವಾರ ನಾನಾವತಿ ಆಯೋಗ ನೀಡಿದ ವರದಿ ಬಹಿರಂಗಗೊಂಡ ನಂತರ ಬ್ಯಾನರ್ಜಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ತನಿಖೆಯಲ್ಲಿ ಅತಿ ಹೆಚ್ಚಿನ ಸಂಖ್ಯೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಅದರಲ್ಲಿ ಆದಾಯ ತೆರಿಗೆ ಅಧಿಕಾರಿಯೊಬ್ಬರು ಸೇರಿದ್ದಾರೆ.ಬೆಂಕಿ ಹಿಡಿದ ಬೋಗಿಯಿಂದ ಅವರು ಪಾರಾದವರಲ್ಲಿ ಅವರು ಒಬ್ಬರಾಗಿದ್ದು ಅವರ ಹೇಳಿಕೆಯನ್ನು ಪಡೆಯಲಾಗಿತ್ತು ಎಂದು ಬ್ಯಾನರ್ಜಿ ಹೇಳಿದ್ದಾರೆ.

ಸಾಬರ್‌ಮತಿ ಎಕ್ಸ್‌ಪ್ರೆಸ್ ಎಸ್-6 ಮತ್ತು ಎಸ್-7ರ ಬೋಗಿಗೆ ಬೆಂಕಿ ಹತ್ತಿದ ಪರಿಣಾಮ 58 ಮಂದಿ ಕರಸೇವಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಸುಮಾರು 250 ಮಂದಿ ಸುರಕ್ಷಿತವಾಗಿ ಪಾರಾಗಿದ್ದರು.

ಬೋಗಿಗೆ ಬೆಂಕಿ ಹಿಡಿದ ಕಾರಣ ಬೇರೆಯದೇ ಆಗಿದ್ದು,ಅದು ಪೆಟ್ರೋಲ್‌ನಿಂದ ಹೊತ್ತಿಕೊಂಡ ಬೆಂಕಿಯಲ್ಲ ಎಂದು ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ನಾನಾವತಿ ಆಯೋಗ ಮತ್ತು ಬ್ಯಾನರ್ಜಿ ಆಯೋಗ ಒಂದಕ್ಕೊಂದು ತಾಳೆಯಾಗದೆ ಸಾಬರ್‌ಮತಿ ಅಗ್ನಿ ದುರಂತ ಪ್ರಕರಣ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದೆ.
ಮತ್ತಷ್ಟು
ಗೋದ್ರಾ ಸಾಬರ್‌ಮತಿ ಪ್ರಕರಣ ಪೂರ್ವಯೋಜಿತ:ನಾನಾವತಿ
ಆಡ್ವಾಣಿ ಹತ್ಯೆಗೆ ಇಂಡಿಯನ್ ಮುಜಾಹಿದ್ದೀನ್ ಸ್ಕೆಚ್
ಕುಡಿದು ವಾಹನ ಚಾಲನೆ: ಆರೋಪಿಯ ಖುಲಾಸೆ!
ಒಂದೇ ಕೈಯಿಂದ ಚಪ್ಪಾಳೆ: ಯುವಕ ವಿಶ್ವದಾಖಲೆ
ರಾಜ್ ಠಾಕ್ರೆ ವಿರುದ್ಧ ಕ್ರಮಕೈಗೊಳ್ಳಿ: ಬೊ.ಹೈಕೋರ್ಟ್
ಒರಿಸ್ಸಾ ಭುಗಿಲೆದ್ದ ಹಿಂಸಾಚಾರಕ್ಕೆ 60ಮನೆ ಭಸ್ಮ