ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚರ್ಚ್ ದಾಳಿಯಲ್ಲಿ ಭಜರಂಗದಳ ಕೈವಾಡ: ಕೇಂದ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚರ್ಚ್ ದಾಳಿಯಲ್ಲಿ ಭಜರಂಗದಳ ಕೈವಾಡ: ಕೇಂದ್ರ
ಕರ್ನಾಟಕದ ವಿವಿಧೆಡೆ ಪ್ರಾರ್ಥನಾ ಮಂದಿರ,ಚರ್ಚ್‌ಗಳ ಮೇಲಿನ ದಾಳಿಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವಾಲಯ, ಇದರ ಹಿಂದೆ ಭಜರಂಗದಳ ಕಾರ್ಯಕರ್ತರ ಕೈವಾಡವಿದೆ ಎಂದು ಆರೋಪಿಸಿದೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ (ಎನ್‌ಸಿಎಂ) ಕೋಮುದಳ್ಳುರಿ ಹತೋಟಿಗೆ ತರಲು ವಿಫಲವಾಗಿರುವುದಕ್ಕಾಗಿ ಕರ್ನಾಟಕದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಹಿಂಸಾಚಾರದಲ್ಲಿ ಭಾಗಿಯಾದ ಭಜರಂಗದಳದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ಕೇಂದ್ರ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಎನ್‌ಸಿಎಂ ನಿಯೋಗವು ಗಲಭೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಪ್ರಧಾನಿ ಕಚೇರಿಗೆ ವರದಿ ಸಲ್ಲಿಸಿದೆ. ಅಲ್ಲದೇ ಕೇಂದ್ರ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ಎಂ.ಎಲ್.ಕುಮಾವತ್ ನೇತೃತ್ವದ ನಿಯೋಗ ಕೂಡ ಗಲಭೆಯಲ್ಲಿ ಭಜರಂಗದಳದ ಕೈವಾಡ ಇರುವ ಬಗ್ಗೆ ವರದಿಯಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನೆರವಾಗುವಂತೆ ಕೇಂದ್ರ ಸರ್ಕಾರ ಕ್ಷಿಪ್ರ ಕಾರ್ಯಾಚರಣೆಯ 300 ಮಂದಿ ಸಿಬ್ಬಂದಿಗಳನ್ನು ತಕ್ಷಣವೇ ಕಳುಹಿಸಲಿದೆ ಎಂದು ಕೇಂದ್ರ ಹೇಳಿದೆ.
ಮತ್ತಷ್ಟು
ಪೆಟ್ರೋಲ್‌ನಿಂದ ಬೋಗಿಗೆ ಬೆಂಕಿ ಹಿಡಿದಿಲ್ಲ:ಬ್ಯಾನರ್ಜಿ
ಗೋದ್ರಾ ಸಾಬರ್‌ಮತಿ ಪ್ರಕರಣ ಪೂರ್ವಯೋಜಿತ:ನಾನಾವತಿ
ಆಡ್ವಾಣಿ ಹತ್ಯೆಗೆ ಇಂಡಿಯನ್ ಮುಜಾಹಿದ್ದೀನ್ ಸ್ಕೆಚ್
ಕುಡಿದು ವಾಹನ ಚಾಲನೆ: ಆರೋಪಿಯ ಖುಲಾಸೆ!
ಒಂದೇ ಕೈಯಿಂದ ಚಪ್ಪಾಳೆ: ಯುವಕ ವಿಶ್ವದಾಖಲೆ
ರಾಜ್ ಠಾಕ್ರೆ ವಿರುದ್ಧ ಕ್ರಮಕೈಗೊಳ್ಳಿ: ಬೊ.ಹೈಕೋರ್ಟ್