ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಂಧಮಲ್‌ನಲ್ಲಿ ಮುಂದುವರಿದ ಕೋಮುದಳ್ಳುರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಂಧಮಲ್‌ನಲ್ಲಿ ಮುಂದುವರಿದ ಕೋಮುದಳ್ಳುರಿ
ಒರಿಸ್ಸಾದ ಕಂಧಮಲ್ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮತ್ತೆ ಆರಂಭಗೊಂಡ ಕೋಮು ಹಿಂಸಾಚಾರ ತಾರಕ್ಕೇರಿದ್ದು, ಸುಮಾರು 100ಮನೆ, ಎರಡು ಚರ್ಚ್ ಸೇರಿದಂತೆ ಪ್ರಾರ್ಥನಾ ಮಂದಿರಗಳು ಬೆಂಕಿಗಾಹುತಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ವಿಗ್ನಗೊಂಡಿರುವ ಕಂಧಮಲ್‌ನಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರದಿಂದ ಭಾರೀ ಪ್ರಮಾಣದಲ್ಲಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಕೋಮುದಳ್ಳುರಿಯಿಂದ ಉರಿಯುತ್ತಿರುವ ಕಂಧಮಲ್ ಜಿಲ್ಲೆಯಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪೊಲೀಸ್ ಪಡೆಯನ್ನು ರಾಜ್ಯಕ್ಕೆ ರವಾನಿಸುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

ಆ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಹರಸಾಹಸ ಪಡುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಕ್ತಿಮೀರಿ ಶ್ರಮಿಸುತ್ತಿರುವುದಾಗಿ ಪಟ್ನಾಯಕ್ ತಿಳಿಸಿದ್ದಾರೆ.

ಕೋಮುದಳ್ಳುರಿಯಿಂದ ತತ್ತರಿಸಿರುವ ಕಂಧಮಲ್‌ಗೆ ಇನ್ನು ಹತ್ತು ಪೊಲೀಸ್ ಕಂಪನಿಯನ್ನು ಕಳುಹಿಸುವುದಾಗಿ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದು, ಗುರುವಾರದ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಈ ಕುರಿತು ತಿಳಿಸುವುದಾಗಿ ಪಟ್ನಾಯಕ್ ಕೇಂದ್ರಕ್ಕೆ ತಿಳಿಸಿರುವುದಾಗಿ ಹೇಳಿದ್ದಾರೆ.

ಕಂಧಮಲ್‌ನಲ್ಲಿನ ಅಲ್ಪಸಂಖ್ಯಾತರ ಪ್ರಾಣ, ಆಸ್ತಿ-ಪಾಸ್ತಿಗೆ ಹಾನಿಯಾಗುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒರಿಸ್ಸಾ ಸರ್ಕಾರಕ್ಕೆ ತಾಕೀತು ಮಾಡಿದ್ದು,ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಎಚ್ಚರಿಕೆ ನೀಡಿದೆ.
ಮತ್ತಷ್ಟು
ಚರ್ಚ್ ದಾಳಿಯಲ್ಲಿ ಭಜರಂಗದಳ ಕೈವಾಡ: ಕೇಂದ್ರ
ಪೆಟ್ರೋಲ್‌ನಿಂದ ಬೋಗಿಗೆ ಬೆಂಕಿ ಹಿಡಿದಿಲ್ಲ:ಬ್ಯಾನರ್ಜಿ
ಗೋದ್ರಾ ಸಾಬರ್‌ಮತಿ ಪ್ರಕರಣ ಪೂರ್ವಯೋಜಿತ:ನಾನಾವತಿ
ಆಡ್ವಾಣಿ ಹತ್ಯೆಗೆ ಇಂಡಿಯನ್ ಮುಜಾಹಿದ್ದೀನ್ ಸ್ಕೆಚ್
ಕುಡಿದು ವಾಹನ ಚಾಲನೆ: ಆರೋಪಿಯ ಖುಲಾಸೆ!
ಒಂದೇ ಕೈಯಿಂದ ಚಪ್ಪಾಳೆ: ಯುವಕ ವಿಶ್ವದಾಖಲೆ