ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇಂಡಿಯನ್ ಮುಜಾಹಿದ್ದೀನ್ ನಿಷೇಧಕ್ಕೆ ಕೇಂದ್ರ ಚಿತ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡಿಯನ್ ಮುಜಾಹಿದ್ದೀನ್ ನಿಷೇಧಕ್ಕೆ ಕೇಂದ್ರ ಚಿತ್ತ
ದೇಶದ ವಾರಣಾಸಿ, ಫೈಜಾಬಾದ್, ಲಕ್ನೋ, ಜೈಪುರ್, ಅಹಮದಾಬಾದ್ ಹಾಗೂ ದೆಹಲಿ ಸರಣಿ ಸ್ಫೋಟಗಳ ಹೊಣೆ ಹೊತ್ತುಕೊಂಡ ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯನ್ನು ನಿಷೇಧಿಸುವತ್ತ ಕೇಂದ್ರ ಸರ್ಕಾರ ಮೊದಲ ಹೆಜ್ಜೆಯನ್ನಿಟ್ಟಿದೆ.

ಆ ನಿಟ್ಟಿನಲ್ಲಿ ಸ್ಫೋಟ ಕೃತ್ಯಗಳನ್ನು ನಡೆಸುತ್ತಿರುವ ಇಂಡಿಯನ್ ಮುಜಾಹಿದ್ದೀನ್ ಈವರೆಗೆ ರಾಜ್ಯದಲ್ಲಿ ನಡೆಸಿದ ವಿಧ್ವಂಸಕ ಕೃತ್ಯಗಳ ತನಿಖಾ ವರದಿಯ ವಿವರಗಳನ್ನು ಕೂಡಲೇ ಕೇಂದ್ರದೊಂದಿಗೆ ಹಂಚಿಕೊಳ್ಳುವಂತೆ ಸೂಚನೆ ನೀಡಿದೆ.

ಪಾಕ್ ಮೂಲದ ನಿಷೇಧಿತ ಲಷ್ಕರ್ ಇ ತೊಯ್ಬಾ ಉಗ್ರಗಾಮಿ ಸಂಘಟನೆಯ ಕೃಪಾಪೋಷಿತದೊಂದಿಗೆ ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯೇ ಈ ಎಲ್ಲಾ ಸ್ಫೋಟ ಕೃತ್ಯಗಳ ಹಿಂದಿನ ಪ್ರಮುಖ ರೂವಾರಿ ಎಂದು ಇತ್ತೀಚೆಗಷ್ಟೇ ದೆಹಲಿ ಮತ್ತು ಮುಂಬೈ ಪೊಲೀಸರು ಖಚಿತಪಡಿಸಿದ್ದರು.

ಅಲ್ಲದೇ ಲಷ್ಕರ್ ಇ ತೊಯ್ಬಾದ ಕಮಾಂಡರ್‌ಗಳಲ್ಲಿ ಒಬ್ಬನಾದ ಅಬು ಅಲ್ ಕ್ವಾಮಾ ನೂತನ ಉಗ್ರಗಾಮಿ ಸಂಘಟನೆಯ ಉಸ್ತುವಾರಿ ನೋಡುಕೊಳ್ಳುತ್ತಿದ್ದು, ಅದರೊಂದಿಗೆ ಭಾರತದಲ್ಲಿ ದುಷ್ಕ್ರತ್ಯ ನಡೆಸಲು ಇಂಡಿಯನ್ ಮುಜಾಹಿದ್ದೀನ್ ಹಾಗೂ ಸಿಮಿಯೊಂದಿಗೂ ನಿರಂತರ ಸಂಪರ್ಕ ಹೊಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ವಿವರದಲ್ಲಿ ಬಿಚ್ಚಿಟ್ಟಿದ್ದಾರೆ.

ಇದರೊಂದಿಗೆ ಸಿಮಿಯ ಮುಖವಾಣಿಯಾದ ನಾಲ್ಕು ಉಗ್ರಗಾಮಿ ಸಂಘಟನೆಗಳಾದ ತಹ್ರೀಕ್ ಇ ಯಾಹ್ಯಾ ಇ ಉಮ್ಮಾತ್ (ಟಿಇಯು), ತೆಹ್ರೀಕ್ ತಾಲಾಬಾ ಎ ಅರೇಬಿಯಾ(ಟಿಟಿಎ), ತೆಹ್ರೀಕ್ ತಾಹಾಫುಜ್ ಇ ಶಾಯರೆ ಇಸ್ಲಾಮ್ (ಟಿಟಿಎಸ್ಐ) ಕುರಿತು ನಿಷೇಧಕ್ಕಾಗಿ ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕಲಾಗಿದೆ.

ಆದರೆ ವಾಹದಾತ್ ಇ ಇಸ್ಲಾಮಿ ಉಗ್ರಗಾಮಿ ಸಂಘಟನೆ ಕುರಿತು ಬಲವಾದ ಸಾಕ್ಷ್ಯಾಧಾರಗಳು ಲಭಿಸದ ಕಾರಣ ಇದನ್ನು ನಿಷೇಧಿಸುವ ಪ್ರಸ್ತಾಪ ಇಲ್ಲ ಎಂದು ಕೇಂದ್ರ ತಿಳಿಸಿದೆ.

ಈ ಉಗ್ರಗಾಮಿ ಸಂಘಟನೆಗಳ ಬಗ್ಗೆ ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಇನ್ನೂ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದ್ದು, ಆ ನಿಟ್ಟಿನಲ್ಲಿ ಈ ಉಗ್ರಗಾಮಿ ಸಂಘಟನೆಗಳ ಮೇಲೆ ನಿಷೇಧ ಹೇರುವ ಮುನ್ನ ಮಾಹಿತಿಗಾಗಿ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳ ಜೊತೆ ಸಂಪರ್ಕ ಹೊಂದಿರುವುದಾಗಿ ಹೇಳಿದೆ.

ಈಗಾಗಲೇ ಲಷ್ಕರ್ ಇ ತೊಯ್ಬಾ ಹಾಗೂ ಸಿಮಿಯ ಸುಮಾರು 34ಭಯೋತ್ಪಾದಕ ಸಂಘಟನೆಗಳನ್ನು 1967ರ ಕಾನೂನು ಬಾಹಿರ ದುಷ್ಕೃತ್ಯ (ಯುಎಪಿಎ) ಕಾಯ್ದೆಯನ್ವಯ ನಿಷೇಧ ಹೇರಲಾಗಿದೆ. ಲಷ್ಕರ್ ಇ ತೊಯ್ಬಾಕ್ಕೆ ಪಾಕ್‌ನಲ್ಲಿ ನಿಷೇಧ ಹೇರಲಾಗಿತ್ತು. ಆದರೂ ಅದು ಈಗಲೂ ಜಮಾತ್ ಉದ್ ದಾವಾ ಹೆಸರು ಸೇರಿದಂತೆ ವಿವಿಧ ಮುಖವಾಡಗಳೊಂದಿಗೆ ಭಯೋತ್ಪಾದನಾ ಚಟುವಟಿಕೆಯಲ್ಲಿ ಸಕ್ರಿಯವಾಗಿದೆ.
ಮತ್ತಷ್ಟು
ಕಂಧಮಲ್‌ನಲ್ಲಿ ಮುಂದುವರಿದ ಕೋಮುದಳ್ಳುರಿ
ಚರ್ಚ್ ದಾಳಿಯಲ್ಲಿ ಭಜರಂಗದಳ ಕೈವಾಡ: ಕೇಂದ್ರ
ಪೆಟ್ರೋಲ್‌ನಿಂದ ಬೋಗಿಗೆ ಬೆಂಕಿ ಹಿಡಿದಿಲ್ಲ:ಬ್ಯಾನರ್ಜಿ
ಗೋದ್ರಾ ಸಾಬರ್‌ಮತಿ ಪ್ರಕರಣ ಪೂರ್ವಯೋಜಿತ:ನಾನಾವತಿ
ಆಡ್ವಾಣಿ ಹತ್ಯೆಗೆ ಇಂಡಿಯನ್ ಮುಜಾಹಿದ್ದೀನ್ ಸ್ಕೆಚ್
ಕುಡಿದು ವಾಹನ ಚಾಲನೆ: ಆರೋಪಿಯ ಖುಲಾಸೆ!