ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾನಾವತಿ ವರದಿ ತಡೆಗೆ ಸುಪ್ರೀಂಕೋರ್ಟ್ ನಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನಾವತಿ ವರದಿ ತಡೆಗೆ ಸುಪ್ರೀಂಕೋರ್ಟ್ ನಕಾರ
PTI
ಗುಜರಾತ್‌ನ ಗೋದ್ರಾ ಸಾಬರ್‌ಮತಿ ಎಕ್ಸ್‌ಪ್ರೆಸ್ ಕರಸೇವಕ ಹತ್ಯಾ ಪ್ರಕರಣದ ಕುರಿತು ತನಿಖೆ ನಡೆಸಿದ್ದ ನ್ಯಾಯಮೂರ್ತಿ ಜಿ.ಟಿ.ನಾನಾವತಿ ಆಯೋಗ ವರದಿ ತಡೆಗೆ ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಅಲ್ಲದೇ ವಿವಾದಿತ ವರದಿಯನ್ನು ಸಾರ್ವಜನಿಕಗೊಳಿಸಿರುವುದನ್ನು ಪ್ರಶ್ನಿಸಿ ಉತ್ತರ ನೀಡುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ನಾನಾವತಿ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸದಂತೆ ತಡೆಯಾಜ್ಞೆ ನೀಡುವಂತೆ ಸ್ವಯಂಸೇವಾ ಸಂಸ್ಥೆಯೊಂದು ಸುಪ್ರೀಂಕೋರ್ಟ್‍‌ಗೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಧೀಶ ಕೆ.ಜಿ.ಬಾಲಕೃಷ್ಣನ್ ಅವರ ಪೀಠ, ತಡೆ ನೀಡುವುದನ್ನು ತಿರಸ್ಕರಿಸಿ,ಅಕ್ಟೋಬರ್ 13ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.

ಗೋದ್ರಾ ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗೆ ಬೆಂಕಿ ಹಚ್ಚಿದ ಪ್ರಕರಣದ ಕುರಿತು ಈ ಮೊದಲು ನ್ಯಾಯಮೂರ್ತಿ ಯು.ಸಿ.ಬ್ಯಾನರ್ಜಿ ಆಯೋಗ ಕೂಡ ವರದಿಯನ್ನು ಸಿದ್ದಪಡಿಸಿದ್ದು, ಅದಕ್ಕೆ ತಡೆಯಾಜ್ಞೆ ನೀಡಲಾಗಿದ್ದು, ಅದೇ ರೀತಿ ಗುರುವಾರ ಗುಜರಾತ್ ಅಸೆಂಬ್ಲಿಯಲ್ಲಿ ಬಹಿರಂಗಗೊಂಡ ನಾನಾವತಿ ಆಯೋಗದ ವರದಿಗೂ ತಡೆಯಾಜ್ಞೆ ನೀಡಬೇಕೆಂದು ಎನ್‌ಜಿಓ ಅರ್ಜಿಯಲ್ಲಿ ಕೋರಿತ್ತು.

ಗೋದ್ರಾ ಕರಸೇವಕ ಹತ್ಯಾಕಾಂಡದ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯಾಗಲಿ, ಸಚಿವರಾಗಲಿ, ಪೊಲೀಸ್ ಇಲಾಖೆಯ ಯಾವುದೇ ಪಾತ್ರದ ಬಗ್ಗೆ ನಿಖರವಾದ ಸಾಕ್ಷ್ಯ ಇಲ್ಲ ಎಂಬುದಾಗಿ ನಾನಾವತಿ ಆಯೋಗದ ವರದಿಯಲ್ಲಿ ತಿಳಿಸಲಾಗಿತ್ತು.
ಮತ್ತಷ್ಟು
ಇಂಡಿಯನ್ ಮುಜಾಹಿದ್ದೀನ್ ನಿಷೇಧಕ್ಕೆ ಕೇಂದ್ರ ಚಿತ್ತ
ಕಂಧಮಲ್‌ನಲ್ಲಿ ಮುಂದುವರಿದ ಕೋಮುದಳ್ಳುರಿ
ಚರ್ಚ್ ದಾಳಿಯಲ್ಲಿ ಭಜರಂಗದಳ ಕೈವಾಡ: ಕೇಂದ್ರ
ಪೆಟ್ರೋಲ್‌ನಿಂದ ಬೋಗಿಗೆ ಬೆಂಕಿ ಹಿಡಿದಿಲ್ಲ:ಬ್ಯಾನರ್ಜಿ
ಗೋದ್ರಾ ಸಾಬರ್‌ಮತಿ ಪ್ರಕರಣ ಪೂರ್ವಯೋಜಿತ:ನಾನಾವತಿ
ಆಡ್ವಾಣಿ ಹತ್ಯೆಗೆ ಇಂಡಿಯನ್ ಮುಜಾಹಿದ್ದೀನ್ ಸ್ಕೆಚ್