ಶಿಲ್ಲಾಂಗ್‌ಗೆ ಆಗಮಿಸಲಿರುವ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರನ್ನು ಹತ್ಯೆಗೈಯುವುದಾಗಿ ಗುರುವಾರ ಬೆದರಿಕೆಯ ಇ-ಮೇಲ್ ಕಳುಹಿಸಿದ ಮೊಮಿನುಲ್ ಹಕ್ ಎಂಬಾತನನ್ನು ಬಂಧಿಸಿದ್ದು,ಶುಕ್ರವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬಂಧನಕ್ಕೊಳಗಾದ ಹಕ್ ಕಾನೂನು ಪದವಿಯ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಈತ ಶಿಲ್ಲಾಂಗ್‌ನ ಲಾಬಾನ್ ಪ್ರದೇಶದ ವಿವಾಸಿಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಸೆ.29ರಂದು ಶಿಲ್ಲಾಂಗ್‌ಗೆ ಭೇಟಿ ನೀಡಲಿರುವ ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಅವರನ್ನು ಕೊಲ್ಲುವುದಾಗಿ ಇ-ಮೇಲೆ ಬೆದರಿಕೆಯ ಸಂದೇಶವನ್ನು ಗುರುವಾರ ಕೆಲವು ಸ್ಥಳೀಯ ಮಾಧ್ಯಮಗಳಿಗೆ ಕಳುಹಿಸಿದ್ದ.
ಬಳಿಕ ಈ ಇ-ಮೇಲೆ ಸಂದೇಶ ಎಲ್ಲಿಂದ ಬಂದಿತ್ತು ಎಂಬ ಬಗ್ಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ನಂತರ ಹಕ್‌ನನ್ನು ಗುರುವಾರ ತಡರಾತ್ರಿ ಬಂಧಿಸಿದ್ದು, ಇ-ಮೇಲ್ ಅನ್ನು ತಾನೇ ಕಳುಹಿಸಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ಸ್ಪೆಶಲ್ ಬ್ರ್ಯಾಂಚ್‌ನ ಎಸ್.ಬಿ.ಸಿಂಗ್ ತಿಳಿಸಿದ್ದಾರೆ.
ಈತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದ್ದು, ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಜೊತೆ ಯಾವುದಾದರು ಸಂಪರ್ಕ ಇದೆಯಾ ಎಂಬ ಬಗ್ಗೆ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.
|