ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗೋಧ್ರಾ ಹತ್ಯಾಕಾಂಡ:ಪ್ರಗತಿಪರರ ಕ್ಷಮೆಗೆ ಮೋದಿ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಧ್ರಾ ಹತ್ಯಾಕಾಂಡ:ಪ್ರಗತಿಪರರ ಕ್ಷಮೆಗೆ ಮೋದಿ ಆಗ್ರಹ
ಗೋಧ್ರಾ ನರಮೇಧ ವ್ಯವಸ್ಥಿತ ಪಿತೂರಿ ಎಂಬುದನ್ನು ನಾನಾವತಿ ಆಯೋಗದ ವರದಿ ಬಹಿರಂಗಗೊಳಿಸಿದೆ.ಆದರೆ ಇಷ್ಟು ದಿನ ಸೆಕ್ಯುಲರ್ ಮುಖವಾಡದೊಂದಿಗೆ ಬೊಬ್ಬಿರಿದು ಕೊಲೆಗಾರರನ್ನು ರಕ್ಷಿಸಲು ಹೆಣಗಾಡುತ್ತಿದ್ದವರು ಈಗಲಾದರು ಕ್ಷಮೆ ಕೋರಬೇಕೆಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ.

ಅವರು ಇಲ್ಲಿ ಶುಕ್ರವಾರ ಸಂಜೆ ನಡೆದ ರಸ್ತೆ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತ,ಇಷ್ಟು ದಿನ ಸುಳ್ಳು ಪ್ರಚಾರ ಮಾಡುತ್ತಿದ್ದವರಿಗೆ ಈಗ ಮುಖ ಎತ್ತಿ ತೋರಿಸಲೂ ಆಗದಂತಾಗಿದೆ. ಸತ್ಯ,ನ್ಯಾಯಕ್ಕೆ ಅವರು ಬೆಲೆ ಕೊಡುವವರೇ ಆದರೆ ಗುಜರಾತ್ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ನಕಲಿ ಪ್ರಗತಿಪರರು ಇಷ್ಟು ದಿನ ತಮ್ಮ ವಿರುದ್ಧ ಗಂಟಲು ಬಿರಿಯುವಂತೆ ಅಪಪ್ರಚಾರ ಮಾಡುತ್ತಿದ್ದರು, ಒಂದಲ್ಲ ಒಂದು ದಿನ ಸತ್ಯ ಹೊರಕ್ಕೆ ಬಂದೇ ಬರುತ್ತದೆಂದು ನಾವು ಮೌನವಾಗಿದ್ದೆವು.ಈಗ ಹುಸಿ ಮುಖವಾಡ ಕಳಚಿಬಿದ್ದಿದೆ ಎಂದು ಮೋದಿ ಲೇವಡಿ ಮಾಡಿದರು.

ಈ ಹತ್ಯಾಕಾಂಡದ ಬಗ್ಗೆ ವಿಚಾರಣೆ ನಡೆಸಲು ಅಧಿಕೃತ ಆಯೋಗವೇ ಇದ್ದಾಗ ಕಾಂಗ್ರೆಸ್ ಯು.ಸಿ.ಬ್ಯಾನರ್ಜಿ ಆಯೋಗವನ್ನು ರಚಿಸಿದ್ದಾದರೂ ಏಕೆ ಎಂದು ಮೋದಿ ಖಾರವಾಗಿ ಪ್ರಶ್ನಿಸಿದ್ದಾರೆ.

ಇದೀಗ ನಾನಾವತಿ ಆಯೋಗ ಹತ್ಯಾಕಾಂಡದ ಬಗೆಗಿನ ಒಂದನೇ ವರದಿಯನ್ನು ನೀಡಿದ್ದು, ಎರಡನೇ ವರದಿಯನ್ನು ಡಿಸೆಂಬರ್ ವೇಳೆಗೆ ನೀಡಲಿದೆ.
ಮತ್ತಷ್ಟು
ಆಡ್ವಾಣಿ ಹತ್ಯೆ ಬೆದರಿಕೆ: ಇ-ಮೇಲ್ ಆರೋಪಿ ಬಂಧನ
ನಾನಾವತಿ ವರದಿ ತಡೆಗೆ ಸುಪ್ರೀಂಕೋರ್ಟ್ ನಕಾರ
ಇಂಡಿಯನ್ ಮುಜಾಹಿದ್ದೀನ್ ನಿಷೇಧಕ್ಕೆ ಕೇಂದ್ರ ಚಿತ್ತ
ಕಂಧಮಲ್‌ನಲ್ಲಿ ಮುಂದುವರಿದ ಕೋಮುದಳ್ಳುರಿ
ಚರ್ಚ್ ದಾಳಿಯಲ್ಲಿ ಭಜರಂಗದಳ ಕೈವಾಡ: ಕೇಂದ್ರ
ಪೆಟ್ರೋಲ್‌ನಿಂದ ಬೋಗಿಗೆ ಬೆಂಕಿ ಹಿಡಿದಿಲ್ಲ:ಬ್ಯಾನರ್ಜಿ