ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಶಂಕಿತ ಉಗ್ರರಿಗೆ ಕಾನೂನು ನೆರವು: ಅರ್ಜುನ್ ಬೆಂಬಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಂಕಿತ ಉಗ್ರರಿಗೆ ಕಾನೂನು ನೆರವು: ಅರ್ಜುನ್ ಬೆಂಬಲ
ಜಾಮಿಯಾ ವಿವಿ ಉಪಕುಲಪತಿ ಕ್ರಮಕ್ಕೆ ಸಮರ್ಥನೆ: ಪ್ರತಿಪಕ್ಷಗಳ ಆಕ್ರೋಶ
ದೆಹಲಿ ಸರಣಿ ಬಾಂಬ್ ಸ್ಫೋಟದ ನಂತರ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವ ಕೇಂದ್ರ ಸರಕಾರಕ್ಕೆ, ದೆಹಲಿಯ ಜಾಮಿಯಾ ನಗರದಲ್ಲಿ ನಡೆದ ಎನ್‌ಕೌಂಟರ್, ಬಂಧನ ಇತ್ಯಾದಿಗಳಿಂದಾಗಿ ಅಲ್ಪಸಂಖ್ಯಾತರ ಬೆಂಬಲ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಕಾರಣಕ್ಕೆ, ಜಾಮಿಯಾ ಮಿಲಿಯಾ ಮುಸ್ಲಿಂ ವಿಶ್ವವಿದ್ಯಾನಿಲಯದ ಉಪಕುಲಪತಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ಶುಕ್ರವಾರ ಜಾಮಿಯಾ ಉಪಕುಲಪತಿ ಮುಷಿರುಲ್ ಹಸನ್ ಅವರನ್ನು ಭೇಟಿ ಮಾಡಿದ ಅರ್ಜುನ್ ಸಿಂಗ್, ಸ್ಫೋಟ ಆರೋಪಿಗಳಿಗೆ ಕಾನೂನಿನ ಸಹಾಯ ನೀಡುವ ಮುಸ್ಲಿಂ ವಿಶ್ವವಿದ್ಯಾನಿಲಯದ ನಿರ್ಧಾರವನ್ನು ಬೆಂಬಲಿಸಿದರು. ಈ ನಡುವೆ, ಬಂಧಿತ ವಿದ್ಯಾರ್ಥಿಗಳಿಗೆ ಕಾನೂನು ನೆರವು ನೀಡುವ ಹಸನ್ ನಿರ್ಧಾರವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬೆಂಬಲಿಸಿರುವುದು ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಫೋಟಕ್ಕೆ ಸಂಬಂಧಿಸಿ ಬಂಧಿತರಾಗಿರುವವರಿಗೆ ನೆರವು ನೀಡಲು ಮುಂದಾಗಿರುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಅತ್ಯುತ್ತಮ ಪ್ರಯತ್ನವಾಗಿದ್ದು, ನಾವದನ್ನು ಬೆಂಬಲಿಸುವುದಾಗಿ ಅರ್ಜುನ್ ಹೇಳಿದ್ದರು.

ಮುಸ್ಲಿಂ ವಿವಿ ಕ್ಯಾಂಪಸ್ ಒಳಗಿನ ರಸ್ತೆಯೊಂದಕ್ಕೆ ಅರ್ಜುನ್ ಸಿಂಗ್ ಹೆಸರಿರಿಸಿ ವಿವಾದಕ್ಕೀಡಾಗಿದ್ದ ಹಸನ್, ಒಂದು ಬಾರಿ ತಮ್ಮ ಉದಾರವಾದಿತನಕ್ಕಾಗಿ ವಿವಿಯಿಂದಲೇ ಹೊರ ತಳ್ಳಲ್ಪಟ್ಟಿದ್ದರು ಎಂದು ಸಿಎನ್ಎನ್-ಐಬಿಎನ್ ಟಿವಿ ಚಾನೆಲ್ ಮಾಹಿತಿ ನೀಡಿದೆ.

ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಸಮುದಾಯದವರೇ ಬಂಧನಕ್ಕೀಡಾಗುತ್ತಿರುವುದು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ನಿದ್ದೆಗೆಡಿಸಿದೆ. ತಮ್ಮ ಓಟ್ ಬ್ಯಾಂಕನ್ನು ಎಲ್ಲಿ ಕಳೆದುಕೊಳ್ಳುತ್ತೇವೋ ಎಂಬ ಆತಂಕ ಅದಕ್ಕಿದೆ ಎಂದು ಪ್ರತಿಪಕ್ಷಗಳು ಈಗಾಗಲೇ ವಾಗ್ದಾಳಿ ಆರಂಭಿಸಿವೆ. ಚುನಾವಣಾ ವರ್ಷವೂ ಶೀಘ್ರದಲ್ಲೇ ಆಗಮಿಸುತ್ತಿರುವುದರಿಂದ ಜಾಮಿಯಾ ವಿವಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಅರ್ಜುನ್ ಸಿಂಗ್ ಅವರಿಗೆ ಯುಪಿಎ ನಾಯಕತ್ವವು ಮೌನ ಸಮ್ಮತಿಯನ್ನೇ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮತ್ತಷ್ಟು
ಗೋಧ್ರಾ ಹತ್ಯಾಕಾಂಡ:ಪ್ರಗತಿಪರರ ಕ್ಷಮೆಗೆ ಮೋದಿ ಆಗ್ರಹ
ಆಡ್ವಾಣಿ ಹತ್ಯೆ ಬೆದರಿಕೆ: ಇ-ಮೇಲ್ ಆರೋಪಿ ಬಂಧನ
ನಾನಾವತಿ ವರದಿ ತಡೆಗೆ ಸುಪ್ರೀಂಕೋರ್ಟ್ ನಕಾರ
ಇಂಡಿಯನ್ ಮುಜಾಹಿದ್ದೀನ್ ನಿಷೇಧಕ್ಕೆ ಕೇಂದ್ರ ಚಿತ್ತ
ಕಂಧಮಲ್‌ನಲ್ಲಿ ಮುಂದುವರಿದ ಕೋಮುದಳ್ಳುರಿ
ಚರ್ಚ್ ದಾಳಿಯಲ್ಲಿ ಭಜರಂಗದಳ ಕೈವಾಡ: ಕೇಂದ್ರ