ಕರ್ನಾಟಕದಲ್ಲಿ ನಡೆದ ಪ್ರಾರ್ಥನಾ ಮಂದಿರ ದಾಳಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗೆ ತುಂಬಾ ಟೀಕೆ ಎದುರಿಸಿದ್ದ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಎಂ.ವೀರಪ್ಪ ಮೊಯಿಲಿ ಇದೀಗ, ಗೋದ್ರಾ ನರಮೇಧದ ಕುರಿತು ನಾನಾವತಿ ವರದಿ ಕ್ಲೀನ್ ಚಿಟ್ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು,ಮುಖ್ಯಮಂತ್ರಿ ನರೇಂದ್ರ ಮೋದಿಗೆ ಬೇರೆ ಯಾವುದೇ ದೇಶದಲ್ಲಾಗಿದ್ದರೆ ಅವರನ್ನು ಗಲ್ಲಿಗೇರಿಸುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದೂತ್ವ ಅಜೆಂಡಾವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ನರೇಂದ್ರ ಮೋದಿಯವರು ಏನು ಮಾಡಿದರೂ ತಮ್ಮ ಮೇಲಿರುವ ನರಮೇಧದ ಆರೋಪದಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ನರೇಂದ್ರ ಮೋದಿ ಇಂತಹದ್ದೇ ಅಟ್ಟಹಾಸವನ್ನು ಬೇರೆ ಯಾವ ದೇಶದಲ್ಲಿ ಮಾಡಿದ್ದರೂ ಅವರನ್ನು ಗಲ್ಲಿಗೇರಿಸುತ್ತಿದ್ದರು. ಆ ನಿಟ್ಟಿನಲ್ಲಿ ತಮ್ಮನ್ನು ಗಲ್ಲಿಗೇರಿಸಿಲ್ಲ ಎಂಬುದಕ್ಕೆ ಮೋದಿ ಖುಷಿ ಪಡಬೇಕು.
ಭಾರತದಲ್ಲಿ ಪ್ರಜಾಪ್ರಭುತ್ವ ಸ್ವಲ್ಪ ಹೆಚ್ಚಾಯಿತು. ಆದ್ದರಿಂದಲೇ ಅವರಂತಹವರು ಇನ್ನೂ ಉಳಿದಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗಷ್ಟೇ ಗೋದ್ರಾ ನರಮೇಧದ ಕುರಿತು ತನಿಖೆ ನಡೆಸಿದ ನಾನಾವತಿ ಆಯೋಗ ವರದಿಯನ್ನು ಗುಜರಾತ್ ಸರ್ಕಾರಕ್ಕೆ ನೀಡಿದ್ದು, ಅದರಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯಾಗಲಿ, ಸಚಿವರಾಗಲಿ, ಪೊಲೀಸ್ ಇಲಾಖೆ ಕೂಡ ಗಲಭೆಯಲ್ಲಿ ಸಕ್ರಿಯವಾಗಿ ಪಾತ್ರ ವಹಿಸಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂಬುದಾಗಿ ತಿಳಿಸಿತ್ತು.
|