ದಕ್ಷಿಣ ದೆಹಲಿಯ ಮೆಹರೂಲಿ ಪ್ರದೇಶದಲ್ಲಿ ಶನಿವಾರ ಮಧ್ನಾಹ್ನ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಓರ್ವ 13ರ ಹರೆಯದ ಬಾಲಕ ಬಲಿಯಾಗಿದ್ದು, 23 ಜನರು ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಎರಡು ಮೋಟಾರ್ ಬೈಕ್‌ನಲ್ಲಿ ಆಗಮಿಸಿದ್ದ ವ್ಯಕ್ತಿಗಳು ಈ ಬಾಂಬ್ ಅನ್ನು ಇರಿಸಿರುವ ಶಂಕೆ ಇರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಈ ಬಾಂಬ್ ಕಡಿಮೆ ಪ್ರಮಾಣದ ತೀವ್ರತೆ ಹೊಂದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸ್ಫೋಟ ಘಟನೆ ನಡೆಯುತ್ತಿದ್ದಂತೆಯೇ ಪೊಲೀಸರು ಮತ್ತು ಅಗ್ನಿಶಾಮಕದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು,