ರಾಜಧಾನಿಯಲ್ಲಿ ಮತ್ತೆ ಬಾಂಬ್ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ರಾಜೀನಾಮೆ ನೀಡಬೇಕೆಂದು ಭಾರತೀಯ ಜನತಾಪಕ್ಷ ಶನಿವಾರ ಆಗ್ರಹಿಸಿದೆ.
ದೇಶದಲ್ಲಿ ನಿರಂತರವಾಗಿ ಉಗ್ರರ ಬಾಂಬ್ ದಾಳಿ ಮುಂದವರಿಯುತ್ತಿರುವ ಹಿನ್ನೆಲೆಯಲ್ಲಿ ಪಾಟೀಲ್ ಅವರು ತಮ್ಮ ಹುದ್ದೆಯಲ್ಲಿ ಮುಂದುರಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂಬುದಾಗಿ ಬಿಜೆಪಿ ಕಟುವಾಗಿ ಆರೋಪಿಸಿದೆ.
ದಕ್ಷಿಣ ದೆಹಲಿಯ ಮೆಹರೌಲಿಯಲ್ಲಿ ಶನಿವಾರ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟ ವಿ.ಕೆ.ಮಲೋತ್ರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿದ ಅವರು,ದೇಶದಲ್ಲಿನ ಭದ್ರತಾ ವ್ಯವಸ್ಥೆ ಕುರಿತು ಚರ್ಚಿಸುವ ಸಲುವಾಗಿ ಕೂಡಲೇ ಸಂಸತ್ ಅಧಿವೇಶವನ್ನು ಕರೆಯುವಂತೆ ಒತ್ತಾಯಿಸಿದರು.
ಕೇವಲ ದಿನದಲ್ಲಿ ಮೂರು ಬಾರಿ ಬಟ್ಟೆಯನ್ನು ಬದಲಾಯಿಸುತ್ತ ಕಾಲ ಕಳೆದರೆ ಸಾಲದು,ಭಯೋತ್ಪಾದನೆ ತಾಂಡವಾಡುತ್ತಿದ್ದು, ಅದನ್ನು ನಿಗ್ರಹಿಸುವಲ್ಲಿ ಏನು ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ಪಾಟೀಲ್ ಸಾರ್ವಜನಿಕರ ಮುಂದಿಡಲಿ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
|