ಕಾನೂನು ಬಾಹಿರ ಕೃತ್ಯಗಳನ್ನು ನಡೆಸುತ್ತಿರುವ ಗ್ಯಾಂಗ್‌ನ ಜತೆ ಸಂಪರ್ಕ ಹೊಂದಿರುವ ಇಂಡಿಯನ್ ಮುಜಾಹಿದ್ದೀನ್‌ನ ಸ್ಥಾಪಕ ಸದಸ್ಯ ಎಂದು ಶಂಕಿಸಲಾಗಿರುವ ಪದವೀಧರ ರೋಶನ್ ಖಾನ್ ಆಲಿಯಾಸ್ ರಿಯಾಜ್ ಭಟ್ಕಳ ಎಂಬಾತನ ವಿರುದ್ಧ ಮುಂಬೈ ಪೊಲೀಸರು ಕ್ರಿಮಿನಲ್ ದೂರು ದಾಖಲುಗೊಂಡಿರುವುದಾಗಿ ಶನಿವಾರ ತಿಳಿಸಿದ್ದಾರೆ.
ಉತ್ತರಕನ್ನಡ ಭಟ್ಕಳದ ನಿವಾಸಿಯಾಗಿರುವ ರಿಯಾಜ್ ಭಟ್ಕಳ ಫಾಜ್ಲು ರೆಹಮಾನ್ ಎಂಬಾತನ ಗ್ಯಾಂಗ್‌ನೊಂದಿಗೆ ಶಾಮೀಲಾಗಿ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದ.
ಆ ನಿಟ್ಟಿನಲ್ಲಿ ಭಟ್ಕಳ ಆತನ ವಿರುದ್ಧ ಸಾಂತಾಕ್ರೂಜ್, ಕುರ್ಲಾ, ಓಶಿವಾರಾ, ಜುಹೂ ಮತ್ತು ಎಲ್‌ಟಿ ಮಾರ್ಗ್ ಠಾಣೆಗಳಲ್ಲಿ ದೂರುಗಳು ದಾಖಲಾಗಿರುವುದಾಗಿ ಮುಂಬೈ ಪೊಲೀಸ್ ಸಹಾಯಕ ಕಮೀಷನರ್ ರಾಕೇಶ್ ಮಾರಿಯಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಭಟ್ಕಳದ ರಿಯಾಜ್ ಇಲ್ಲಿನ ಗಾರ್ಮೆಂಟ್ ಮತ್ತು ಚರ್ಮಹದ ಮಾಡುವ ಫ್ಯಾಕ್ಟರಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಹೇಳಿದರು. ಆದರೆ ಇದೀಗ ಆತ ಪಾಕಿಸ್ತಾನದಲ್ಲಿ ತಲೆಮರೆಯಿಸಿಕೊಂಡಿರುವ ಸಾಧ್ಯತೆ ಇದೆ ಶಂಕಿಸಿದರು.
ಜುಲೈ 26ರಂದು ಅಹಮದಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸುವ ಮುನ್ನ ರಿಯಾಜ್ ಅಹಮದಾಬಾದ್‌ಗೆ ಆಗಮಿಸಿರುವುದಾಗಿ ಇತ್ತೀಚೆಗಷ್ಟೇ ಬಂಧನಕ್ಕೊಳಗಾಗಿದ್ದ ಆರೋಪಿ ಅಫ್ಜಲ್ ಉಸ್ಮಾನಿ ಬಾಯ್ಬಿಟ್ಟಿರುವುದಾಗಿ ಮಾರಿಯಾ ತಿಳಿಸಿದರು.
ಆದರೆ ಭಟ್ಕಳ ಸೇರಿದಂತೆ ಆತನ ತಂಡದ ಸದಸ್ಯರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದರೆ ಎಂಬ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ ಎಂದರು.
|