ಸಂಸದರ ವಿರುದ್ಧ ಅಪಮಾನಕರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಯವರಿಗೆ ದೀಪಾವಳಿ ಹಬ್ಬದ ನಂತರ ಸಮನ್ಸ್ ಜಾರಿಗೊಳಿಸುವ ಸಾಧ್ಯತೆಗಳಿವೆ ಎಂದು ಲೋಕಸಭೆಯ ವಿಶೇಷ ಸಮಿತಿ ಹೇಲಇಕೆ ನೀಡಿದೆ.
ಹಿರಿಯ ಕಾಂಗ್ರೆಸ್ ಸಂಸದ ಕಿಶೋರ್ ಚಂದ್ರ ದೇವ್ ನೇತೃತ್ವದ ಲೋಕಸಭೆಯ ವಿಶೇಷ ಸಮಿತಿ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಅವರನ್ನು ಸಂಸತ್ತಿಗೆ ಕರೆಸುವ ನಿರ್ಧಾರವನ್ನು ಈಗಾಗಲೇ ತೆಗೆದುಕೊಂಡಿದ್ದು, ದೀಪಾವಳಿ ಹಬ್ಬದ ನಂತರ ಸಮನ್ಸ್ ಜಾರಿಗೊಳಿಸಲಾಗುವುದು ಎಂದು ಸಂಸದೀಯ ಮೂಲಗಳು ತಿಳಿಸಿವೆ
ಸಂಸದ ಡಿ.ಪಿ.ಯಾದವ್ ಸೇರಿದಂತೆ ಕೆಲ ಸದಸ್ಯರು ಸಂಸದರ ವಿರುದ್ಧ ಶಿವಸೇನೆ ಅಧ್ಯಕ್ಷ ಬಾಳಾಸಾಹೇಬ್ ಠಾಕ್ರೆ ನೀಡಿರುವ ಹೇಳಿಕೆಗಳನ್ನು ಕುರಿತಂತೆ ಸಾಕ್ಷಗಳನ್ನು ಸಮಿತಿ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.
ಬಾಳಾ ಠಾಕ್ರೆ ಮುಖ್ಯ ಸಂಪಾದಕತ್ವದಲ್ಲಿ ಹೊರಬರುವ ಸಾಮ್ನಾ ಪತ್ರಿಕೆಯಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ಸಂಸದರು ಸಂಸತ್ತಿನಲ್ಲಿ ಮರಾಠಿ ವಿರೋಧಿ ನಿಲುವುಗಳನ್ನು ಹೊಂದಿದ್ದಾರೆ ಎನ್ನುವ ಆರೋಪ ಮಾಡಿದ ಮಾಡಿದ ಹಿನ್ನೆಲೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕ ಶಿವಸೇನಾ ಸಂಸದ ಸಂಜಯ್ ರಾವುತ್ ಹಾಗೂ ಮುಖ್ಯಸಂಪಾದಕ ಠಾಕ್ರೆ ವಿರುದ್ಧ ಸಮಿತಿಗೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.
|