ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಆಗಮಿಸಲು ಒಂದು ಗಂಟೆ ಬೊಲೆರೋದಲ್ಲಿ ಆಗಮಿಸುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಹಾಯಕ ಕಮಾಂಡೆಂಟ್ ಮತ್ತು ಜೀಪಿನ ಚಾಲಕ ಸೇರಿದಂತೆ ಇಬ್ಬರೂ ನಕ್ಸಲೀಯರ ನೆಲಬಾಂಬ್ ಸ್ಫೋಟಕ್ಕೆ ಬಲಿಯಾಗಿರುವ ಘಟನೆ ಸೋಮವಾರ ಚತ್ತೀಸ್‌ಗಢದಲ್ಲಿ ನಡೆದಿದೆ.
ಚತ್ತೀಸ್‌ಗಢ ಬಸ್ತಾರ್ ಪ್ರದೇಶದತ್ತ ತೆರಳಿದ್ದ ಸಿಆರ್‌ಪಿಎಫ್ ವಾಹನವೊಂದು ಶಂಕಿತ ನಕ್ಸಲೀಯರ ನೆಲಬಾಂಬ್ ಸ್ಫೋಟಕ್ಕೆ ಆಹುತಿಯಾದ ಪರಿಣಾಮ ಇಬ್ಬರು ಬಲಿಯಾಗಿದ್ದರು. ಈ ಘಟನೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆಗಮಿಸುವ ಒಂದು ಗಂಟೆ ಮೊದಲು ಸಂಭವಿಸಿದ್ದು, ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ.
41ನೇ ಸಿಆರ್‌ಪಿಎಫ್ ಬೆಟಾಲಿಯನ್‌ನ ದಿವಾಕರ್ ಮಹಾಪಾತ್ರ ಹಾಗೂ ಬೊಲೆರೋ ಚಾಲಕ ಸಾವನ್ನಪ್ಪಿದ್ದಾರೆ. 41ಬೆಟಾಲಿಯನ್‌ನ ಅವರೆಲ್ಲ ಈ ಪ್ರದೇಶದಲ್ಲಿನ ರಸ್ತೆ ಉದ್ಘಾಟನಾ ಸಮಾರಂಭವನ್ನು ಪೂರೈಸಿ ವಾಪಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿತ್ತು.
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಇಲ್ಲಿನ ಪ್ರಸಿದ್ಧ ಚಿತ್ರಕೋಟೆ ಜಲಪಾತಕ್ಕೆ ಸೋಮವಾರ ಭೇಟಿ ನೀಡುವ ಒಂದು ಗಂಟೆ ಮೊದಲು ನಕ್ಸಲೀಯರು ಈ ದುಷ್ಕೃತ್ಯ ನಡೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. |
|