ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಸ್ಫೋಟ ಸಂಭವಿಸಿದ ಬಳಿಕ, ಥಾಣೆಯಲ್ಲಿ ಕೋಮುಗಲಭೆ ಆರಂಭವಾಗುವ ಮೂಲಕ ಜನರು ಆತಂಕದಲ್ಲಿ ಇರುವಂತಾಗಿದೆ.
ಸೋಮವಾರ ರಾತ್ರಿ ಹೊತ್ತಿಕೊಂಡ ಕೋಮುಗಲಭೆಯಿಂದಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಘರ್ಷಣೆಯಲ್ಲಿ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು,ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ನವರಾತ್ರಿ ಉತ್ಸವಕ್ಕಾಗಿ ಪೆಂಡಾಲ್‌ನ್ನು ಹಾಕುತ್ತಿದ್ದ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಒಂದು ಕೋಮಿನ ಜನರು ಪೆಂಡಾಲ್ ಹಾಕುವ ಮೂಲಕ ಜಾಗವನ್ನು ಆಕ್ರಮಿಸುತ್ತಿದ್ದಾರೆಂದು ಆರೋಪಿಸಿ ತಕರಾರಿಗೆ ಇಳಿದಿದ್ದರು. ಈ ವಿವಾದವೇ ಘರ್ಷಣೆಗೆ ಕಾರಣವಾಗಿತ್ತು.
ಮುನ್ನೆಚ್ಚರಿಕೆಯ ಅಂಗವಾಗಿ ಪ್ರದೇಶದಾದ್ಯಂತ 144ಸೆಕ್ಷನ್ ಅನ್ನು ಜಾರಿಗೊಳಿಸಲಾಗಿದೆ.ಆದರೂ ಕೆಲವೆಡೆ ಕಲ್ಲುತೂರಾಟ ಮುಂದುವರಿದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಘರ್ಷಣೆ ನಡೆದ ಪ್ರದೇಶಕ್ಕೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಭೇಟಿ ಪರಿಶೀಲನೆ ನಡೆಸಿದ ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು.
|
|