ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಂಧಮಾಲ್‌‌ ಪೊಲೀಸ್ ಗೋಲಿಬಾರ್‌ಗೆ 3 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಂಧಮಾಲ್‌‌ ಪೊಲೀಸ್ ಗೋಲಿಬಾರ್‌ಗೆ 3 ಬಲಿ
ಒರಿಸ್ಸಾ ಕಂಧಮಾಲ್ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಭುಗಿಲೆದ್ದ ಕೋಮು ಘರ್ಷಣೆ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಮೂರು ಮಂದಿ ಬಲಿಯಾಗಿರುವುದಾಗಿ ಟೈಮ್ಸ್ ನೌ ಟಿವಿ ಚಾನೆಲ್ ವರದಿ ತಿಳಿಸಿದೆ.

ಕಂಧಮಾಲ್‌ನ ಗ್ರೆಸಿಂಗಿಯಾ ಪ್ರದೇಶದಲ್ಲಿ ಎರಡು ಕೋಮುಗಳ ನಡುವೆ ಉಂಟಾದ ಘರ್ಷಣೆಯ ಸಂದರ್ಭದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಅಲ್ಲದೇ ಈ ಪ್ರದೇಶದಲ್ಲಿ ಕೆಲವು ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿರುವುದಾಗಿಯೂ ವರದಿ ಹೇಳಿದೆ.

ಇಲ್ಲಿನ ರಾಯ್‌ಕಿಯಾ, ಉದಯ್‌ಗಿರಿಯಲ್ಲಿನ ಕೆಲವು ಮನೆಗಳಿಗೂ ಮತ್ತೆ ಬೆಂಕಿ ಹಚ್ಚಲಾಗಿದೆ.

ಕೋಮುದಳ್ಳುರಿಯಿಂದ ಹೊತ್ತಿ ಉರಿಯುತ್ತಿರುವ ಪರಿಣಾಮ, ಪ್ರಮುಖ ಮುಖಂಡರು ಶಾಂತಿ ಕಾಪಾಡುವಂತೆ ಕರೆ ನೀಡಿದ್ದಾರೆ. ಸೋಮವಾರ ಎರಡು ಪ್ರದೇಶಗಳಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿತ್ತು.

ವಿವಿಧೆಡೆ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿರುವ ಕ್ರಿಶ್ಚಿಯನ್ ಸಮುದಾಯದ ಮೇಲೆ ಈ ಕಚ್ಚಾ ಬಾಂಬ್ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ. ಆಗೋಸ್ಟ್ 23ರಂದು ಸ್ವಾಮಿ ಲಕ್ಷ್ಮಣಾನಂದ ಅವರನ್ನು ಆಗಂತುಕರು ಹತ್ಯೆಗೈದಿರುವುದಕ್ಕೆ ಪ್ರತಿಕಾರ ಎಂಬಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಈ ಕೃತ್ಯದಲ್ಲಿ ತೊಡಗಿರುವುದಾಗಿ ಕ್ರೈಸ್ತ ಸಮುದಾಯ ಆರೋಪಿಸಿದೆ.

ಆ ನಿಟ್ಟಿನಲ್ಲಿ ಅ.2ರ ಗಾಂಧಿ ಜಯಂತಿ ದಿನದಂದು ಎಲ್ಲಾ ಸಮುದಾಯಗಳ ಮುಖಂಡರು ಮತ್ತು ಸಮಿತಿಯೊಂದಿಗೆ ಮಾತುಕತೆ ನಡೆಸಿ,ರಾಜ್ಯದಲ್ಲಿನ ಶಾಂತಿ-ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಕುಮಾರ್ ತಿಳಿಸಿದ್ದು, ಆ ದಿನ ಸದ್ಬಾವನಾ ರಾಲಿಯನ್ನು ಆಯೋಜಿಸಿರುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಫೋಟ:ಗುಜರಾತ್‌‌ನಾದ್ಯಂತ 'ಹೈ ಅಲರ್ಟ್'
ಥಾಣೆ: ಕೋಮುಗಲಭೆಗೆ ಓರ್ವ ಬಲಿ
ಜೋಧ್‌ಪುರ್:ಕಾಲ್ತುಳಿತಕ್ಕೆ 100ಕ್ಕೂ ಹೆಚ್ಚು ಬಲಿ
ಗುಜರಾತ್, ಮಹಾರಾಷ್ಟ್ರಗಳಲ್ಲಿ ಸ್ಪೋಟ: 5 ಸಾವು
ಧೂಮಪಾನ ನಿಷೇಧಕ್ಕೆ ತಡೆ ಇಲ್ಲ: ಸುಪ್ರೀಂಕೋರ್ಟ್
ಸಿಂಗೂರ್: ಕೇಂದ್ರದ ಪ್ರವೇಶಕ್ಕೆ ಬ್ಯಾನರ್ಜಿ ಆಗ್ರಹ