ಭೂಗತ ಜಗತ್ತಿನಿಂದ ರಾಜಕೀಯ ಕ್ಷೇತ್ರದತ್ತ ಹೊರಳಿದ್ದ ಬಬ್ಲೂ ಶ್ರೀವಾಸ್ತವ್‌ಗೆ ಕಾನ್ಪುರ್ ಜಿಲ್ಲಾ ನ್ಯಾಯಾಲಯ ಮಂಗಳವಾರ ಎಲ್‌ಡಿ ಆರೋರಾ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಿದೆ.
1993ರಲ್ಲಿ ಕಸ್ಟಮ್ ಅಧಿಕಾರಿಯಾಗಿದ್ದ ಎಲ್.ಡಿ.ಆರೋರಾ ಅವರನ್ನು ಬಬ್ಲೂ ಶ್ರೀವಾಸ್ತವ್ ಹತ್ಯೆಗೈದಿದ್ದ. ನಂತರ ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ,ಆರೋರಾ ಹತ್ಯೆಗಾಗಿ ಕಳುಹಿಸಿಕೊಟ್ಟಿದ್ದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಬಬ್ಲೂನ್‌ನಿಂದ ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಬಬ್ಲೂ ದಾವೂದ್‌ನ ನಿಕಟವರ್ತಿಯಾಗಿದ್ದು.
ಆರೋರಾ ಅವರ ಹತ್ಯೆಯಲ್ಲಿ ಬಬ್ಲೂ ಹಾಗೂ ಆರೋರಾ ಅವರ ಸಹವರ್ತಿಗಳಾದ ಕೆಕೆ ಸೈನಿ ಮತ್ತು ಸರ್ದಾರ್ ಮಂಜೀತ್ ಸಿಂಗ್ ಭಾಗಿಯಾಗಿಯಾಗಿದ್ದರು. ಅವರ ವಿರುದ್ಧವೂ ಐಪಿಸಿ 203ರ ಅನ್ವಯ ದೂರು ದಾಖಲಿಸಲಾಗಿತ್ತು.
ಇದೊಂದು ಅಪರೂಪದಲ್ಲಿಯೇ ಅಪರೂಪದ ಪ್ರಕರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಆದರೂ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸದೆ,ಇದೊಂದು ಭಯೋತ್ಪಾದನೆಗೆ ಸಮಾನಾದ ಕೃತ್ಯವೆಂದು ಪರಿಗಣಿಸಿ ಜೀವಾವಧಿ ವಿಧಿಸುತ್ತಿರುವುದಾಗಿ ಹೇಳಿದೆ.
ಬಬ್ಲೂ ವಿರುದ್ಧ ಇನ್ನೂ 40ಕೇಸುಗಳು ವಿಚಾರಣೆಗೆ ಬಾಕಿಯಿದೆ. 36 ಕೇಸುಗಳಲ್ಲಿ ಖುಲಾಸೆಗೊಂಡಿರುವ ,ಈ ಡೆಡ್ಲಿ ಪಾತಕಿ ಬಬ್ಲೂ ಈಗಾಗಲೇ ರಾಮ್ ಪ್ರಸಾದ್ ಕೊಲೆ ಪ್ರಕರಣದಲ್ಲಿ ಸೆರೆಮನೆ ವಾಸ ಅನುಭವಿಸಿದ್ದ. |
|