ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಿಜ್ವಾನೂರ್ ಕೇಸ್:ಆರೋಪಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಜ್ವಾನೂರ್ ಕೇಸ್:ಆರೋಪಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ
ರಿಜ್ವಾನೂರ್ ರಹಮಾನ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಹಾಗೂ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳು ಮಂಗಳವಾರ ನಗರ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಅವರಿಗೆ 14ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಏತನ್ಮಧ್ಯೆ ರಿಜ್ವಾನೂರ್ ಪ್ರಕರಣದಲ್ಲಿ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿರುವುದಾಗಿ ಸಿಬಿಐ ವಕೀಲ ಪಾರ್ಥ ತಪಸ್ವಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಮಾಜಿ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಸೇರಿದಂತೆ , ಮಾಜಿ ಪೊಲೀಸ್ ಸಹಾಯಕ ವರಿಷ್ಠಾಧಿಕಾರಿ ಸುಕಾಂತಿ ಚಕ್ರವರ್ತಿ ಮತ್ತು ಪೊಲೀಸ್ ಇನ್ಸಪೆಕ್ಟರ್ ಕೃಷ್ಣೇಂದು ದಾಸ್‌‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕರಣದ ಕುರಿತು ತನಿಖೆ ನಡೆಸಿದ್ದ ಸಿಬಿಐ ಈ ಮೊದಲೇ ಕೋಲ್ಕತಾ ಹೈಕೋರ್ಟ್‌ಗೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಈ ಮೂವರು ಅಧಿಕಾರಿಗಳು ಹತ್ಯೆ ಸಂಚಿನಲ್ಲಿ ಭಾಗಿ ಎಂದು ಸಿಬಿಐ ಆರೋಪಿಸಿದೆ.

ಕೈಗಾರಿಕೋದ್ಯಮಿ ಅಶೋಕ್ ತೋಡಿ ಸೇರಿದಂತೆ ಏಳು ಮಂದಿಯ ವಿರುದ್ಧ ಸೆಪ್ಟೆಂಬರ್ 22ರಂದು ಸಿಬಿಐ ಚಾರ್ಜ್‌ಶೀಟ್ ಅನ್ನು ದಾಖಲಿಸಿತ್ತು.

ಕಂಪ್ಯೂಟರ್ ಗ್ರಾಫಿಕ್ ಶಿಕ್ಷಕರಾಗಿದ್ದ ರಿಜ್ವಾನೂರ್ ಉದ್ಯಮಿ ಅಶೋಕ್ ತೋಡಿಯ ಮಗಳು ಪ್ರಿಯಾಂಕಳನ್ನು2007ರ ಆಗೋಸ್ಟ್ 18 ರಂದು ವಿವಾಹವಾಗಿದ್ದ. ಬಳಿಕ ಅವರಿಬ್ಬರು ಆಗೋಸ್ಟ್ 21ರಿಂದ ಪಾರ್ಕ್ ಸರ್ಕಸ್ ರೆಸಿಡೆನ್ಸ್‌ನಲ್ಲಿ ವಾಸ ಮಾಡಲು ಆರಂಭಿಸಿದ್ದರು.

ತೋಡಿ ಮತ್ತು ಅವರ ಸಂಬಂಧಿಗಳ ಒತ್ತಡದಿಂದಾಗಿ ರಿಜ್ವಾನೂರ್ ದಂಪತಿಗಳನ್ನು ಪೊಲೀಸ್ ಹೆಡ್ ಕ್ವಾರ್ಟಸ್‌ಗೆ ಮೂರು ಬಾರಿ ಕರೆದು ಮಾತುಕತೆ ನಡೆಸಿ, ಪ್ರಿಯಾಂಕಳಿಗೆ ವಾಪಸು ತಂದೆಯ ಬಳಿ ಹೋಗುವಂತೆ ಒತ್ತಡ ಹೇರಿದ್ದರು.

ನಂತರ ಪ್ರಿಯಾಂಕಳ ಚಿಕ್ಕಪ್ಪ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಎಂಬ ಲಿಖಿತವಾಗಿ ಭರವಸೆ ನೀಡಿದ ಬಳಿಕ ಪ್ರಿಯಾಂಕ ತನ್ನ ಮನೆಗೆ ತೆರಳಿದ್ದಳು. ಇದಾದ ಕೆಲವು ದಿನಗಳಲ್ಲಿಯೇ(ಸೆ.21) ರಿಜ್ವಾನೂರ್ ಮೃತದೇಹ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರೋರಾ ಹತ್ಯೆ ಪ್ರಕರಣ - ಬಬ್ಲೂಗೆ ಜೀವಾವಧಿ ಶಿಕ್ಷೆ
ಕಂಧಮಾಲ್‌‌ ಪೊಲೀಸ್ ಗೋಲಿಬಾರ್‌ಗೆ 3 ಬಲಿ
ಸ್ಫೋಟ:ಗುಜರಾತ್‌‌ನಾದ್ಯಂತ 'ಹೈ ಅಲರ್ಟ್'
ಥಾಣೆ: ಕೋಮುಗಲಭೆಗೆ ಓರ್ವ ಬಲಿ
ಜೋಧ್‌ಪುರ್:ಕಾಲ್ತುಳಿತಕ್ಕೆ 150ಕ್ಕೂ ಹೆಚ್ಚು ಬಲಿ
ಗುಜರಾತ್, ಮಹಾರಾಷ್ಟ್ರಗಳಲ್ಲಿ ಸ್ಪೋಟ: 5 ಸಾವು