ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಪಂಚದಲ್ಲಿ ನಡೆದ ಪ್ರಮುಖ ಕಾಲ್ತುಳಿತ ಘಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಪಂಚದಲ್ಲಿ ನಡೆದ ಪ್ರಮುಖ ಕಾಲ್ತುಳಿತ ಘಟನೆ
PTI
ರಾಜಸ್ತಾನದ ಚಾಮುಂಡ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಕಾಲ್ತುಳಿತದಲ್ಲಿ ಅಂದಾಜು 150ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಇದು ದೇಶದಲ್ಲಿ ನಡೆದ ಅತ್ಯಂತ ದೊಡ್ಡ ಕಾಲ್ತುಳಿತ ಪ್ರಕರಣವಾಗಿದೆ. ಪ್ರಪಂಚದಲ್ಲಿ ಕಳೆದ 20ವರ್ಷಗಳಲ್ಲಿ ನಡೆದ ಪ್ರಮುಖ ಕಾಲ್ತುಳಿತ ಪ್ರಕರಣಗಳ ವಿವರ ಇಲ್ಲಿದೆ.

1988 ಮಾರ್ಚ್ ತಿಂಗಳಿನಲ್ಲಿ ಕಾಠ್ಮಂಡುವಿನ ನೇಪಾಳ ಸೊಸೆಸರ್ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 70ಮಂದಿ ಬಲಿಯಾಗಿದ್ದರು.

1990ಜುಲೈ ತಿಂಗಳಿನಲ್ಲಿ ಸೌದಿ ಅರೇಬಿಯಾ ಸಮೀಪದ ಅಲ್ ಮೌಸೇಮ್ ಸುರಂಗ ಮಾರ್ಗದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 1,426ಮಂದಿ ಹತರಾಗಿದ್ದರು. ಇಸ್ಲಾಂ ಅತಿ ಪ್ರಮುಖವಾದ ಹಜ್ ಯಾತ್ರೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು.

1994 ಮೇ ತಿಂಗಳಿನಲ್ಲಿ ಸೌದಿ ಅರೇಬಿಯಾ ಜಾಮರಾತ್ ಸೇತುವೆ ಸಮೀಪ ನಡೆದ ಕಾಲ್ತುಳಿತ ಘಟನೆಯಲ್ಲಿ 270ಮಂದಿ ಭಕ್ತರು ಸಾವನ್ನಪ್ಪಿದ್ದರು. ಡೆವಿಲ್ ಸಂಕೇತವಾಗಿರುವ ಗುಡ್ಡಕ್ಕೆ ಕಲ್ಲು ಹೊಡೆಯುವ ಮುಸ್ಲಿಂ ಭಕ್ತರ ಈ ಸಂಪ್ರದಾಯ ಸಂದರ್ಭದಲ್ಲಿ ಘಟನೆ ನಡೆದಿತ್ತು.

1998 ಏಪ್ರಿಲ್‌ನಲ್ಲಿ ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆಯ ವೇಳೆ ನಡೆದ ನೂಕು ನುಗ್ಗಲಿನಲ್ಲಿ 119 ಮುಸ್ಲಿಂ ಭಕ್ತರು ಸಾವನ್ನಪ್ಪಿದ್ದರು.

2001 ಮೇನಲ್ಲಿ ಗಲಭೆ ನಿರತ ಅಭಿಮಾನಿಗಳತ್ತ ಪೊಲೀಸ್ ಪಡೆ ಹಾರಿಸಿದ ಅಶ್ರವಾಯುವಿನಿಂದ ಓಟಕಿತ್ತ ಸಂದರ್ಭದಲ್ಲಿ ಆಫ್ರಿಕ ಗಾನಾದ ಪ್ರಮುಖ ಸೊಸೇರ್ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 126ಮಂದಿ ಬಲಿಯಾಗಿದ್ದರು.

2004 ಫೆಬ್ರುವರಿಯಲ್ಲಿ ಸೌದಿ ಅರೇಬಿಯಾ ಸಮೀಪದ ಜಾಮಾರಾತ್ ಸೇತುವೆ ಸಮೀಪ ಹಜ್ ಯಾತ್ರಾರ್ಥಿಗಳು ನಡೆಸುವ ಕಲ್ಲು ತೂರಾಟ ಸಂಪ್ರದಾಯದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 251ಮಂದಿ ಸಾವನ್ನಪ್ಪಿದ್ದರು.

2005 ಜನವರಿಯಲ್ಲಿ ಮಹಾರಾಷ್ಟ್ರ ದೇವಾಲವೊಂದರಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯರು,ಮಕ್ಕಳು ಸೇರಿದಂತೆ 265ಮಂದಿ ಮರಣವನ್ನಪ್ಪಿದ್ದರು.

2005 ಆಗೋಸ್ಟ್ ತಿಂಗಳಿನಲ್ಲಿ ಗುಂಪಿನಲ್ಲಿ ಆತ್ಮಹತ್ಯಾ ಬಾಂಬರ್‌ ಸೇರಿಕೊಂಡಿದ್ದಾನೆಂಬ ಸುಳ್ಳುಸುದ್ದಿ ಹರಡಿದ ಪರಿಣಾಮ ಬಾಗ್ದಾದ್‌ನ ಟೈಗ್ರಿಸ್ ನದಿಯ ಸೇತುವೆ ಬಳಿ ನಡೆದ ಕಾಲ್ತುಳಿತದಲ್ಲಿ 1,005 ಶಿಯಾಗಳು ಸಾವನ್ನಪ್ಪಿದ್ದರು.

2006 ಜನವರಿಯಲ್ಲಿ ಸೌದಿ ಅರೇಬಿಯಾದ ಜಾಮಾರಾತ್ ಸೇತುವೆ ಬಳಿ ಹಜ್ ಯಾತ್ರಾರ್ಥಿಗಳ ನೂಕುನುಗ್ಗಲಿನಲ್ಲಿ 362ಮುಸ್ಲಿಂ ಯಾತ್ರಿಗಳು ಸಾವನ್ನಪ್ಪಿದ್ದರು.

2006 ಫೆಬ್ರುವರಿಯಲ್ಲಿ ಮಾನಿಲಾ ಸ್ಟೇಡಿಯಂನಲ್ಲಿ ಫಿಲಿಫೈನ್ಸ್‌‌ನ ಟೆಲಿವಿಷನ್ ಗೇಮ್ ಶೋ ಏರ್ಪಡಿಸಿದ್ದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 71 ಮಂದಿ ಬಲಿಯಾಗಿದ್ದರು.

2006 ಸೆಪ್ಟೆಂಬರ್ ತಿಂಗಳಿನಲ್ಲಿ ದಕ್ಷಿಣ ಇಬ್ಬಾ ಪ್ರದೇಶದಲ್ಲಿ ಯೆಮೇನಿ ಸ್ಟೇಡಿಯಂನಲ್ಲಿ ಅಧ್ಯಕ್ಷ ಅಲಿ ಅಬ್ದುಲ್ಲಾ ಅವರು ಚುನಾವಣಾ ಪೂರ್ವ ರಾಲಿಯನ್ನು ಆಯೋಜಿಸಿದ್ದ ಸಂದರ್ಭದಲ್ಲಿ ನಡೆದ ನೂಕುನುಗ್ಗಲಿನಲ್ಲಿ 51ಮಂದಿ ಸಾವನ್ನಪ್ಪಿದ್ದರು.

2008 ಆಗೋಸ್ಟ್ ತಿಂಗಳಿನಲ್ಲಿ ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ನೈನಾ ದೇವಿ ದೇವಾಲಯದಲ್ಲಿ ಭಕ್ತರು ನೆರೆದಿದ್ದ ಸಂದರ್ಭದಲ್ಲಿ ಭೂಕುಸಿತ ಉಂಟಾಗಿದೆ ಎಂಬ ಸುಳ್ಳು ಸುದ್ದಿಯಿಂದಾಗಿ ಭಕ್ತರು ದಿಕ್ಕೆಟ್ಟು ಓಟಕಿತ್ತ ಪರಿಣಾಮ 145ಮಂದಿ ಬಲಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಿಜ್ವಾನೂರ್ ಕೇಸ್:ಆರೋಪಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ
ಆರೋರಾ ಹತ್ಯೆ ಪ್ರಕರಣ - ಬಬ್ಲೂಗೆ ಜೀವಾವಧಿ ಶಿಕ್ಷೆ
ಕಂಧಮಾಲ್‌‌ ಪೊಲೀಸ್ ಗೋಲಿಬಾರ್‌ಗೆ 3 ಬಲಿ
ಸ್ಫೋಟ:ಗುಜರಾತ್‌‌ನಾದ್ಯಂತ 'ಹೈ ಅಲರ್ಟ್'
ಥಾಣೆ: ಕೋಮುಗಲಭೆಗೆ ಓರ್ವ ಬಲಿ
ಜೋಧ್‌ಪುರ್:ಕಾಲ್ತುಳಿತಕ್ಕೆ 150ಕ್ಕೂ ಹೆಚ್ಚು ಬಲಿ