ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಭ್ಯರ್ಥಿ ಘೋಷಣೆಗೆ ಸಮಯವಾಗಿಲ್ಲ: ಡಾ. ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಭ್ಯರ್ಥಿ ಘೋಷಣೆಗೆ ಸಮಯವಾಗಿಲ್ಲ: ಡಾ. ಸಿಂಗ್
PTI
ಯುಎಸ್ ಫ್ರಾನ್ಸ್ ದೇಶಗಳ ಹತ್ತು ದಿನದ ಪ್ರವಾಸದ ನಂತರ ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಭಾರತಕ್ಕೆ ಬಂದಿಳಿದಿದ್ದಾರೆ.

ವಿಶ್ವದೆಲ್ಲೆಡೆ ಉಂಟಾಗಿರುವ ಆರ್ಥಿಕ ಹಣದುಬ್ಬರದ ಕುರಿತಾಗಿ ಪ್ರತಿಕ್ರಿಯಿಸಿದ ಅವರು ಈ ವಿಷಯದಲ್ಲಿ ಭಾರತ ತನ್ನ ನಿಯಮಾವಳಿಗಳನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದೇ ವೇಳೆ ಭಾರತವನ್ನು ಹಣದುಬ್ಬರದ ಕೆಡುಕಿನಿಂದ ರಕ್ಷಿಸುವುದೇ ತಮ್ಮ ಮೊದಲ ಗುರಿ ಎಂದು ಅವರು ತಿಳಿಸಿದರು.

ಇದಲ್ಲದೆ ಡಾ. ಸಿಂಗ್ ಫ್ರಾನ್ಸ್‌ನಲ್ಲಿ ಸಿಖ್ಖರ ಮೇಲಾಗುತ್ತಿರುವ ದೌರ್ಜನ್ಯದ ಕುರಿತಾಗಿಯೂ ಗಮನಸೆಳೆದರು.

"ಸಿಖ್ಖರು ಟರ್ಬನ್ ಧರಿಸುವುದಕ್ಕೆ ಹೇರಲಾದ ನಿಷೇಧವನ್ನು ಹಿಂತೆಗೆದುಕೊಳ್ಳುವುದಾಗಿ ಸರ್ಕೊಜಿ ಭರವಸೆ ನೀಡಿದ್ದಾರೆ. ಇಲ್ಲವಾದಲ್ಲಿ ಫ್ರಾನ್ಸ್‌ನಲ್ಲಿ ಓದುತ್ತಿರುವ ಸಿಖ್ಖ್ ಜನಾಂಗದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಈ ವಿಷಯದಲ್ಲಿ ಸಿಖ್ಖರ ಭಾವನಾತ್ಮಕ ಮತ್ತು ಧಾರ್ಮಿಕ ನಂಬಿಕೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ." ಎಂಬುದಾಗಿ ಪ್ರಧಾನಿ ಸಿಂಗ್ ವಿವರಿಸಿದರು.

ಮುಂದಿನ ಚುನಾವಣೆಗೆ ಯುಪಿಎ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರೆಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು 2009 ರ ಚುನಾವಣೆಗೆ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲು ಇದು ಸರಿಯಾದ ಸಮಯವಲ್ಲ ಎಂದು ಹೇಳಿದರು.

ಇದೇ ವೇಳೆ ಗೃಹ ಸಚಿವರನ್ನು ಬದಲಾಯಿಸುವ ಬಗೆಗೆ ಕೇಳಲಾದ ಪ್ರಶ್ನೆಗೂ ಉತ್ತರಿಸಲು ಮನಮೋಹನ್ ಸಿಂಗ್ ನಿರಾಕರಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಲ್ತುಳಿತ ಪ್ರಕರಣ ತನಿಖೆಗೆ ವಸುಂಧರಾ ಆದೇಶ
ಟಿವಿ ಪತ್ರಕರ್ತೆ ಗುಂಡೇಟಿಗೆ ಬಲಿ
ಪ್ರಪಂಚದಲ್ಲಿ ನಡೆದ ಪ್ರಮುಖ ಕಾಲ್ತುಳಿತ ಘಟನೆ
ರಿಜ್ವಾನೂರ್ ಕೇಸ್:ಆರೋಪಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ
ಆರೋರಾ ಹತ್ಯೆ ಪ್ರಕರಣ - ಬಬ್ಲೂಗೆ ಜೀವಾವಧಿ ಶಿಕ್ಷೆ
ಕಂಧಮಾಲ್‌‌ ಪೊಲೀಸ್ ಗೋಲಿಬಾರ್‌ಗೆ 3 ಬಲಿ