ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಟರ್ಬನ್ ವಿಷಯದಲ್ಲಿ ಸರ್ಕೋಜಿ ಮುಕ್ತ ಮನಸ್ಸು:ಪಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟರ್ಬನ್ ವಿಷಯದಲ್ಲಿ ಸರ್ಕೋಜಿ ಮುಕ್ತ ಮನಸ್ಸು:ಪಿಎಂ
ಟರ್ಬನ್ ವಿವಾದದ ಮೂಲಕ ಸಿಖ್ ಸಮುದಾಯದಿಂದ ಪ್ರತಿಭಟನೆ ಎದುರಿಸುತ್ತಿರುವ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ಈ ವಿವಾದವನ್ನು ಬಗೆಹರಿಸುವ ಬಗ್ಗೆ ಮುಕ್ತ ಮನಸ್ಸು ಹೊಂದಿರುವುದಾಗಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಬುಧವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐರೋಪ್ಯ ದೇಶದಿಂದ ಭಾರತಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸುತ್ತಿರುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.ನಾನು ಮತ್ತೆ ಸರ್ಕೋಜಿ ಅವರೊಂದಿಗೆ ಶೃಂಗಸಭೆಯಲ್ಲಿ ಸಿಖ್ ಸಮುದಾಯದ ಟರ್ಬನ್ (ಪೇಟ) ವಿಷಯದ ಕುರಿತು ಧ್ವನಿ ಎತ್ತಿರುವುದಾಗಿ ಹೇಳಿದರು.

ಟರ್ಬನ್ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕೋಜಿ, ಮುಕ್ತ ಮನಸ್ಸು ಹೊಂದಿರುವುದಾಗಿ ತಿಳಿಸಿ, ನಾವು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ನೋಡುವುದಾಗಿ ತಿಳಿಸಿದ್ದಾರೆ.

ಅಲ್ಲದೇ ಇದೊಂದು ಸೂಕ್ಷ್ಮ ವಿಷಯವಾಗಿದ್ದು, ಪ್ರಸಕ್ತ ಸಾಲಿನ ಜನವರಿ ತಿಂಗಳಿನಲ್ಲಿ ಸರ್ಕೋಜಿ ಭಾರತಕ್ಕೆ ಆಗಮಿಸಿದಾಗಲೂ ತಾನು ಈ ವಿಷಯದ ಕುರಿತು ಚರ್ಚಿಸಿದ್ದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದರು.

ಟರ್ಬನ್ ವಿಚಾರ ತುಂಬಾ ಸೂಕ್ಷ್ಮತೆರನದ್ದಾಗಿದೆ, ಅಲ್ಲದೇ ಇದು ಸಿಖ್‌ರ ಸಂಪ್ರದಾಯದ ಒಂದು ಭಾಗವಾಗಿದ್ದು ಜೀವನ ವಿಧಾನವಾಗಿದೆ.ಕೂದಲನ್ನು ಕತ್ತರಿಸುವುದನ್ನೂ ಕೂಡ ಸಿಖ್ ಸಮುದಾಯ ಒಪ್ಪುವುದಿಲ್ಲ.

ಆ ನಿಟ್ಟಿನಲ್ಲಿ ಅಧ್ಯಕ್ಷ ಸರ್ಕೋಜಿ ಅವರು ಸಿಖ್ ಸಮುದಾಯಕ್ಕೆ ಕೂದಲನ್ನು ಕಟ್ಟಲು ಅವಕಾಶವಾಗುವ ಟರ್ಬನ್ ಅನ್ನು ಧರಿಸಲು ಅವಕಾಶ ಮಾಡಿಕೊಡಲು ಮುಂದಾಗಬೇಕೆಂದು ಮನವಿ ಮಾಡಿಕೊಂಡಿರುವುದಾಗಿ ಸಿಂಗ್ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಅಣು'ಮೋದನೆ ಮತದಾನಕ್ಕೆ ವೇದಿಕೆ ಸಜ್ಜು
ಅಭ್ಯರ್ಥಿ ಘೋಷಣೆಗೆ ಸಮಯವಾಗಿಲ್ಲ: ಡಾ. ಸಿಂಗ್
ಕಾಲ್ತುಳಿತ ಪ್ರಕರಣ ತನಿಖೆಗೆ ವಸುಂಧರಾ ಆದೇಶ
ಟಿವಿ ಪತ್ರಕರ್ತೆ ಗುಂಡೇಟಿಗೆ ಬಲಿ
ಪ್ರಪಂಚದಲ್ಲಿ ನಡೆದ ಪ್ರಮುಖ ಕಾಲ್ತುಳಿತ ಘಟನೆ
ರಿಜ್ವಾನೂರ್ ಕೇಸ್:ಆರೋಪಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ