ಕಡಿಮೆ ವೇತನ, ವೇತನ ನೀಡಿಕೆಯಲ್ಲಿ ವಿಳಂಬ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತೀಯ ಸಿನಿಮಾ ಚಿತ್ರರಂಗದ ಸುಮಾರು 1ಲಕ್ಷ ಕಾರ್ಮಿಕರು ಬುಧವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಇದಕ್ಕೆ ಬಾಲಿವುಡ್ ಬಿಗ್ ಮತ್ತು ಖ್ಯಾತ ನಟ ಶಾರುಕ್ ಖಾನ್ ಕೂಡ ಬೆಂಬಲ ಸೂಚಿಸಿದ್ದಾರೆ.
ಇವತ್ತಿನಿಂದ ನಾವು ಸಿನಿಮಾ ಶೂಟಿಂಗ್ ಸೆಟ್‌ಗೆ ತೆರಳುವುದಿಲ್ಲ, ಇದರ ಪರಿಣಾಮ ಹಲವಾರ ಶೂಟಿಂಗ್ ರದ್ದುಗೊಂಡಿರುವುದಾಗಿ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯ್ಸ್(ಎಫ್‌ಡಬ್ಲ್ಯುಐಸಿಇ)ನ ವರಿಷ್ಠ ದಿನೇಶ್ ಚತುರ್ವೇದಿ ತಿಳಿಸಿದ್ದಾರೆ.
ಸುಮಾರು 20 ವಿವಿಧ ಯೂನಿಯನ್‌ಗಳು ಎಫ್‌ಡಬ್ಲ್ಯುಐಸಿಇ ಜತೆ ಸೇರಿದ್ದು, ಪ್ರತಿಭಟನೆಯಲ್ಲಿ ನಟರು,ಲೈಟ್ ಬಾಯ್ ಮತ್ತು ಕ್ಯಾಮರ ಆಪರೇಟರ್ಸ್ ಬೆಂಬಲ ಸೂಚಿಸಿದ್ದು, ಆಗೋಸ್ಟ್ ತಿಂಗಳಿನಲ್ಲಿ ಪ್ರೊಡ್ಯೂಸರ್ ಜತೆ ನಡೆಸಿದ ಮಾತುಕತೆ ಮುರಿದು ಬಿದ್ದಿರುವುದಾಗಿ ಹೇಳಿದರು.
ಬುಧವಾರದಿಂದ ಆರಂಭಿಸಿರುವ ಬಂದ್‌ನಲ್ಲಿ ಅಂದಾಜು 147,000ಜನರು ತಮ್ಮ ಕೆಲಸಕ್ಕೆ ಗೈರು ಹಾಜರಾಗಿರುವುದಾಗಿ ದಿನೇಶ್ ತಿಳಿಸಿದರು.
ಉತ್ತಮ ಸಂಬಳ ಕೇಳುವುದು ನಮ್ಮ ಹಕ್ಕು,ಸಿನಿಮಾ ನೌಕರರು ಪಡೆಯುತ್ತಿರುವುದು ಕೇವಲ ದಿನವೊಂದಕ್ಕೆ 600ರೂಪಾಯಿ, ಟೆಲಿವಿಷನ್ ನೌಕರರು ದಿನಕ್ಕೆ 500 ಪಡೆಯುತ್ತಾರೆ. ಆದರೂ ಕಾರ್ಮಿಕರಿಗೆ ಕೊಡುವ ಸಂಬಳವನ್ನಾದರೂ ಸಕಾಲಕ್ಕೆ ನೀಡಲಿ ಎಂದು ಅವರು ಆಗ್ರಹಿಸಿದರು.
ಆ ನಿಟ್ಟಿನಲ್ಲಿ ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಬಂದ್‌ಗೆ ಬಾಲಿವುಡ್‌ನ ದಿಗ್ಗಜರಾದ ಅಮಿತಾಬ್ ಮತ್ತು ಶಾರುಕ್ ಖಾನ್ ಬೆಂಬಲ ಸೂಚಿಸಿ, ಬುಧವಾರ ಶೂಟಿಂಗ್‌ಗೆ ಗೈರು ಹಾಜರಾಗಿದ್ದಾರೆ .ಅಲ್ಲದೇ ಅಂದಾಜು 40ಸಿನಿಮಾ ಶೂಟಿಂಗ್ ರದ್ದುಗೊಂಡಿರುವುದಾಗಿ ಹೇಳಿದರು.
|
|