ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾನು ಜ್ಯೋತಿಷಿಯಲ್ಲ: ಪ್ರಧಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನು ಜ್ಯೋತಿಷಿಯಲ್ಲ: ಪ್ರಧಾನಿ
ಯುಪಿಎ ಮೈತ್ರಿಕೂಟದೊಳಗೆ ಮತ್ತೆ ಎಡಪಕ್ಷದೊಂದಿಗೆ 'ಕೈ'ಜೋಡಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ತಾನು ಜ್ಯೋತಿಷಿ ಅಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಧವಾರ ವಿದೇಶದಿಂದ ವಿಶೇಷ ವಿಮಾನದಲ್ಲಿ ಭಾರತಕ್ಕೆ ವಾಪಸಾಗುತ್ತಿದ್ದ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರಧಾನಿಯವರು ನೀಡಿದ ಉತ್ತರ ಇದಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಲ್ಲಿ ಎಡಪಕ್ಷಗಳು ಮತ್ತೆ ಸೇರುತ್ತವೆಯೇ ಎಂಬ ಪ್ರಶ್ನೆಗೆ ಮನಮೋಹನ್ ಸಿಂಗ್ ಯಾವುದೇ ಸಕಾರಾತ್ಮಕ ಉತ್ತರ ನೀಡಿಲ್ಲ.

ದೇಶದ ಹಿತದೃಷ್ಟಿಯಿಂದ ಅಣುಒಪ್ಪಂದ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಎಡಪಕ್ಷಗಳಿಗೆ ಮನವರಿಕೆ ಮಾಡಿ ಕೊಡುವ ಕೆಲಸ ಮಾಡಲಾಗುವುದು ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದರು.

ನ್ಯೂಕ್ಲಿಯರ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಎಡಪಕ್ಷಗಳು ಜೂನ್ ತಿಂಗಳಿನಲ್ಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸು ಪಡೆದಿರುವುದು ತುಂಬಾ ನೋವಿನ ವಿಚಾರ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಆದರೂ ಪರಮಾಣು ಒಪ್ಪಂದ ವಿಚಾರದಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯ ಎಂಬ ಬಗ್ಗೆ ಭರವಸೆ ಇಲ್ಲ ಎಂಬುದಾಗಿಯೂ ಹೇಳಿದರು.

ಅಣುಬಂಧ ದೇಶದ ಅಭಿವೃದ್ದಿಯ ಒಂದು ಭಾಗವಲ್ಲ,ಇದೊಂದು ದೇಶಕ್ಕೆ ಅಗತ್ಯವಾಗಿರುವ ಒಪ್ಪಂದವಾಗಿದ್ದು,ಆ ನಿಟ್ಟಿನಲ್ಲಿ ಬಿಜೆಪಿ ಮತ್ತು ಎಡಪಕ್ಷಗಳು ದೇಶದ ಹಿತದೃಷ್ಟಿ ಯಿಂದಾಗಿಯಾದರೂ ಅಣು ಒಪ್ಪಂದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂಬ ನಂಬಿಕೆ ಹೊಂದಿರುವುದಾಗಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾಲಿವುಡ್‌‌ ಸ್ಟ್ರೈಕ್‌‌: ಬಿಗ್ ಬಿ-ಶಾರುಕ್ ಬೆಂಬಲ
ಟರ್ಬನ್ ವಿಷಯದಲ್ಲಿ ಸರ್ಕೋಜಿ ಮುಕ್ತ ಮನಸ್ಸು:ಪಿಎಂ
'ಅಣು'ಮೋದನೆ ಮತದಾನಕ್ಕೆ ವೇದಿಕೆ ಸಜ್ಜು
ಅಭ್ಯರ್ಥಿ ಘೋಷಣೆಗೆ ಸಮಯವಾಗಿಲ್ಲ: ಡಾ. ಸಿಂಗ್
ಕಾಲ್ತುಳಿತ ಪ್ರಕರಣ ತನಿಖೆಗೆ ವಸುಂಧರಾ ಆದೇಶ
ಟಿವಿ ಪತ್ರಕರ್ತೆ ಗುಂಡೇಟಿಗೆ ಬಲಿ