ಕಂಪ್ಯೂಟರ್ ಗ್ರಾಫಿಕ್ ಶಿಕ್ಷಕ ರಿಜ್ವಾನೂರ್ ಪ್ರಕರಣದ ಕುರಿತು ಸಿಬಿಐ ಬುಧವಾರ ನ್ಯಾಯಾಲಯಕ್ಕೆ ಸಿಬಿಐ ಆತನ ಸೂಸೈಡ್ ನೋಟ್ ಅನ್ನು ಸಲ್ಲಿಸುವ ಮೂಲಕ ಶಂಕಿತ ಆರೋಪಿ ಉದ್ಯಮಿ ಅಶೋಕ್ ತೋಡಿಗೆ ಕ್ಲೀನ್ ಚಿಟ್ ನೀಡಿದೆ.
ರಿಜ್ವಾನೂರ್ ಹಿಂದೂ ಯುವತಿ ಪ್ರಿಯಾಂಕ ತೋಡಿಯನ್ನು ವಿವಾಹದ ಬಳಿಕ ಸಾಕಷ್ಟು ವಿವಾದ,ತಕರಾರು ನಡೆದ ನಂತರ ಆತನ ಶವ ಪಾತಿಪುಕೂರ್ ರೈಲ್ವೆ ಹಳಿಯ ಮೇಲೆ ಕಂಡು ಬಂದಿತ್ತು.
ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕೋಲ್ಕತಾ ಹೈಕೋರ್ಟ್ ಸಿಬಿಐಗೆ ಆದೇಶ ನೀಡಿತ್ತು. ರಿಜ್ವಾನೂರ್ ಆತನ ಸೂಸೈಡ್ ನೋಟ್‌ನಲ್ಲಿ ಕೋಲ್ಕತಾ ಡಿಜಿಪಿ ಜ್ಞಾನವತಿ ಮತ್ತು ಚಿಕ್ಕಪ್ಪ ರೆಹಮಾನ್ ಅವರ ಕಿರುಕುಳ ಇರುವುದಾಗಿ ಆರೋಪಿಸಿದ್ದ.
ಆ ನಿಟ್ಟಿನಲ್ಲಿ ರಿಜ್ವಾನೂರ್ ಪ್ರಕರಣದಲ್ಲಿ ಪ್ರಿಯಾಂಕ ತಂದೆ ಅಶೋಕ್ ತೋಡಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದ್ದು, ಇದರಲ್ಲಿ ತೋಡಿಯ ಯಾವುದೇ ಪಾತ್ರ ಇಲ್ಲ ಎಂದು ತಿಳಿಸಿದೆ.
ಮಂಗಳವಾರ ರಿಜ್ವಾನೂರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಕಮೀಷನರ್ ಅಜಯ್ ಕುಮಾರ್ ಸೇರಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರು ಸೇರಿಸಿ ಚಾರ್ಜ್‌ಶೀಟ್ ಹಾಕಲಾಗಿತ್ತು. ಅಲ್ಲದೇ ನಿನ್ನೆಯಷ್ಟೇ ಮೂರು ಮಂದಿ ನ್ಯಾಯಾಲಯಕ್ಕೆ ಶರಣಾಗಿದ್ದು, ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. |
|