ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್
ಬಿಹಾರಿಗಳ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ ವರಿಷ್ಠ ರಾಜ್ ಠಾಕ್ರೆ ವಿರುದ್ಧ ಜೆಮ್ಶೆಡ್‌ಪುರ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

ಪ್ರಥಮ ದರ್ಜೆ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಎ.ಕೆ.ತಿವಾರಿ ಅವರು ರಾಜ್ ಠಾಕ್ರೆ ವಿರುದ್ಧ ಬಂಧನದ ಆದೇಶ ಜಾರಿಗೊಳಿಸಿದ್ದು,ಅಲ್ಲದೇ ನವೆಂಬರ್ 17ರಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆಯೂ ಸೂಚಿಸಿದೆ.

ಅಲ್ಲದೇ ರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸ್ ವರಿಷ್ಠಾಧಿಕಾರಿಗೆ ಬಂಧನ ಆದೇಶದ ಪ್ರತಿಯನ್ನು ಜಾರಿಗೊಳಿಸಿರುವುದಾಗಿ ನ್ಯಾಯಪೀಠ ಹೇಳಿದೆ.

ಈ ಕುರಿತು ತನ್ನ ಮೇಲೆ ದಾಖಲಾದ ಅಪರಾಧ ದಂಡ ಸಂಹಿತೆ (ಸಿಆರ್‌ಪಿ) 210, 177 ಮತ್ತು 317ರ ಅನ್ವಯ ದಾಖಲಾಗಿದ್ದ ದೂರನ್ನು ವಜಾಗೊಳಿಸುವಂತೆ ರಾಜ್ ಠಾಕ್ರೆ ವಕೀಲರು ನ್ಯಾಯಾಲಯಕ್ಕೆ 3ಬಾರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ, ಇಂದು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಿಜ್ವಾನೂರ್ ಪ್ರಕರಣ: ತೋಡಿಗೆ 'ಕ್ಲೀನ್ ಚಿಟ್'
ನಾನು ಜ್ಯೋತಿಷಿಯಲ್ಲ: ಪ್ರಧಾನಿ
ಬಾಲಿವುಡ್‌‌ ಸ್ಟ್ರೈಕ್‌‌: ಬಿಗ್ ಬಿ-ಶಾರುಕ್ ಬೆಂಬಲ
ಟರ್ಬನ್ ವಿಷಯದಲ್ಲಿ ಸರ್ಕೋಜಿ ಮುಕ್ತ ಮನಸ್ಸು:ಪಿಎಂ
'ಅಣು'ಮೋದನೆ ಮತದಾನಕ್ಕೆ ವೇದಿಕೆ ಸಜ್ಜು
ಅಭ್ಯರ್ಥಿ ಘೋಷಣೆಗೆ ಸಮಯವಾಗಿಲ್ಲ: ಡಾ. ಸಿಂಗ್