ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಯೋಗ ವರದಿಯಂತೆ ಆರ್ಮಿಗೆ ವೇತನ: ಆಂಟನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಯೋಗ ವರದಿಯಂತೆ ಆರ್ಮಿಗೆ ವೇತನ: ಆಂಟನಿ
ಆರನೇ ವೇತನ ಆಯೋಗ ದೇಶದ ರಕ್ಷಣಾ ಯೋಧರ ವೇತನ ಹೆಚ್ಚಳದ ಶಿಫಾರಸ್ಸು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.ಇದೀಗ ವೇತನ ಶಿಫಾರಸು ಕುರಿತಂತೆ ಆರ್ಮಿ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಸಫಲವಾಗಿದೆ.

ಈ ನಿಟ್ಟಿನಲ್ಲಿ ಆರ್ಮಿಯ ನೂತನ ಪರಿಷ್ಕೃತ ವೇತನ ಕುರಿತಂತೆ ಶೀಘ್ರವೇ ಪ್ರಕಟಣೆ ಹೊರಡಿಸುವುದಾಗಿ ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ.

ಆರನೇ ವೇತನ ಆಯೋಗ ನೀಡಿರುವ ವೇತನ ಶಿಫಾರಸನ್ನು ಜಾರಿಗೆ ತರುವಲ್ಲಿ ಕಳೆದ ವಾರದಿಂದ ನಿರ್ಧಾರ ಕೈಗೊಳ್ಳುವಲ್ಲಿ ಆರ್ಮಿಯ ಮೂರು ವರಿಷ್ಠರು ಮೀನ-ಮೇಷ ಎಣಿಸುತ್ತಿರುವ ಬೆನ್ನಲ್ಲೇ, ಬುಧವಾರದಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಆರ್ಮಿಯ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

ವೇತನ ಕುರಿತಂತೆ ತಿದ್ದುಪಡಿಯ ಬಳಿಕ ವೇತನ ಆಯೋಗ ವರದಿಯನ್ನು ಜಾರಿಗಾಗಿ ಸರ್ಕಾರ ಕ್ಯಾಬಿನೆಟ್‌‌‌ನಲ್ಲಿ ನಿರ್ಧಾರ ಕೈಗೊಳ್ಳಲಿದ್ದು, ಅದಕ್ಕಾಗಿ ಹೆಚ್ಚುವರಿ ಹೊರೆಯಾಗಲಿರುವ ಆರು ಸಾವಿರ ಕೋಟಿ ರೂಪಾಯಿ ಹಣವನ್ನು ಭರಿಸಲಿದೆ ಎಂದು ಆಂಟನಿ ಹೇಳಿದರು.

ಅಲ್ಲದೇ ಆರನೇ ವೇತನ ಆಯೋಗ ನೀಡಿರುವ ಶಿಫಾರಸು ಹಾಗೂ ಕೇಂದ್ರ ಸರ್ಕಾರ ನೀಡುತ್ತಿರುವ ಸಂಬಳಕ್ಕೂ ವ್ಯತ್ಯಾಸ ಇದೆ ಎಂಬ ವರದಿಯನ್ನು ಆಂಟನಿ ಈ ಸಂದರ್ಭದಲ್ಲಿ ತಳ್ಳಿಹಾಕಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್
ರಿಜ್ವಾನೂರ್ ಪ್ರಕರಣ: ತೋಡಿಗೆ 'ಕ್ಲೀನ್ ಚಿಟ್'
ನಾನು ಜ್ಯೋತಿಷಿಯಲ್ಲ: ಪ್ರಧಾನಿ
ಬಾಲಿವುಡ್‌‌ ಸ್ಟ್ರೈಕ್‌‌: ಬಿಗ್ ಬಿ-ಶಾರುಕ್ ಬೆಂಬಲ
ಟರ್ಬನ್ ವಿಷಯದಲ್ಲಿ ಸರ್ಕೋಜಿ ಮುಕ್ತ ಮನಸ್ಸು:ಪಿಎಂ
'ಅಣು'ಮೋದನೆ ಮತದಾನಕ್ಕೆ ವೇದಿಕೆ ಸಜ್ಜು