ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇಂದಿನಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದಿನಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿ
ಹೋಟೇಲ್, ರೆಸ್ಟೋರೆಂಟ್, ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ನಿಷೇಧಕ್ಕೆ ಕೇಂದ್ರ ಸರಕಾರ ಹೊರಡಿಸಿದ ಆದೇಶವು ಮಹಾತ್ಮಗಾಂಧಿ ಜಯಂತಿ ದಿನವಾದ ಗುರುವಾರ ಜಾರಿಗೆ ಬರಲಿದೆ.

ಅಡಿಟೋರಿಯಂ, ಆಸ್ಪತ್ರೆ, ಆವರಣ, ಆರೋಗ್ಯ ಸಂಸ್ಥೆ, ಶಿಕ್ಷಣ ಸಂಸ್ಥೆ, ಸಾರ್ವಜನಿಕ ಕಚೇರಿ, ಕಾಫಿಹೌಸ್, ಪಬ್, ವಿಮಾನನಿಲ್ದಾಣ ಆವರಣ ಇತ್ಯಾದಿಗಳನ್ನು ಸಾರ್ವಜನಿಕ ಸ್ಥಳಗಳೆಂದು ಗುರುತಿಸಲಾಗಿದೆ.

ಖಾಸಗಿ ಕಚೇರಿ, ಸಾರ್ವಜನಿಕ ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿಯೂ ಧೂಮಪಾನ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದಲ್ಲಿ, 200 ರೂ.ಗಳ ದಂಡ ವಿಧಿಸಲಾಗುವುದು.

ಮೂವತ್ತು ಕೋಣೆಗಳಿರುವ ರೆಸ್ಟೋರೆಂಟ್ ಮತ್ತು ಮೂವತ್ತಕ್ಕಿಂತ ಹೆಚ್ಚಿನ ಮಂದಿ ಕುಳಿತುಕೊಳ್ಳಲು ಆಸನವ್ಯವಸ್ಥೆಯಿರುವ ಹೋಟೇಲ್‌ನಲ್ಲಿ ಪ್ರತ್ಯೇಕ ಸ್ಥಳ ಕಲ್ಪಿಸಿಕೊಡಬೇಕೆಂದು ನಿಬಂಧನೆಯನ್ನೂ ವಿಧಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತ್ರಿಪುರಾ ಸರಣಿ ಬಾಂಬ್ ಸ್ಫೋಟಕ್ಕೆ 4 ಬಲಿ
ತ್ರಿಪುರಾದಲ್ಲಿ ಸರಣಿ ಬಾಂಬ್ ಸ್ಫೋಟ, 1 ಸಾವು
ಆಯೋಗ ವರದಿಯಂತೆ ಆರ್ಮಿಗೆ ವೇತನ: ಆಂಟನಿ
ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್
ರಿಜ್ವಾನೂರ್ ಪ್ರಕರಣ: ತೋಡಿಗೆ 'ಕ್ಲೀನ್ ಚಿಟ್'
ನಾನು ಜ್ಯೋತಿಷಿಯಲ್ಲ: ಪ್ರಧಾನಿ