ಮೆಹರಂಗಗಢದ ಚಾಮುಂಡದೇವಿ ದೇವಸ್ಥಾನದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 224ಕ್ಕೆ ಏರಿದೆ. ನಿನ್ನೆ 77ಸಾವು ಸಂಭವಿಸಿರುವುದಾಗಿ ವರದಿಯಾಗಿತ್ತು.
ದುರಂತ ನಡೆದ ಒಂದು ದಿನದ ನಂತರ ಬೆಟ್ಟದ ದೇವಾಲಯದ ಬಾಗಿಲು ತೆರೆದು ಭಕ್ತಾಧಿಗಳಿಗೆ ಮುಕ್ತಗೊಳಿಸಲಾಗಿದೆ.ಆದರೆ ಬುಧವಾರ ಇಲ್ಲಿಗೆ ಭೇಟಿ ನೀಡುವವರ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಮೆಹರಂಗಢದ ಎರಡು ಕಿ.ಮೀ.ಕೋಟೆಯ ದಾರಿಯಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. 15ನೇ ಶತಮಾನದ ಈ ಕೋಟೆಯಲ್ಲಿ ಈಗ 100ಕ್ಕೂ ಅಧಿಕ ಪೊಲೀಸರು ಕಾವಲು ಕಾಯುತ್ತಿದ್ದಾರೆ.
ಕೋಟೆಯ ದೇವಸ್ಥಾನಕ್ಕೆ ಆಗಮಿಸಲು ಮಂಗಳವಾರ ಬಳಸಿದ ದಾರಿಗೆ ಬದಲಾಗಿ ಮತ್ತೊಂದು ದಾರಿಯಲ್ಲಿ ಭಕ್ತರು ಬರುತ್ತಿದ್ದಾರೆ. ಜಾತ್ರೆಯ ಸಂಭ್ರಮದಂತೆ ಕಂಗೊಳಿಸುತ್ತಿದ್ದ ಕೋಟೆಯಲ್ಲಿ ಈಗ ನೀರವ ಮೌನ ಆವರಿಸಿದೆ.
ಕಾಲ್ತುಳಿತ ದುರ್ಘಟನೆಯ ನಂತರ ಸ್ಥಳಕ್ಕೆ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ಭೇಟಿ ನೀಡಿ,ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಈ ಕುರಿತು ತನಿಖೆ ನಡೆಸಿ ವರದಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. |