ಇತ್ತೀಚೆಗೆ ದೇಶಾದ್ಯಂತ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಪ್ರಮುಖ ಸದಸ್ಯರಲ್ಲಿ ಒಬ್ಬನಾದ ರಶೀದ್ ಎಂಬಾತನಿಗಾಗಿ ಉತ್ತರಪ್ರದೇಶದ ಅಜಾಮ್‌ಗರ್‌ನಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಇಂಡಿಯನ್ ಮುಜಾಹಿದ್ದೀನ್‌ನ ಪ್ರಮುಖ ಸದಸ್ಯರಲ್ಲಿ ಒಬ್ಬನಾದ ಅಬು ರಶೀದ್ ಬಂಧನಕ್ಕಾಗಿ ಎಲ್ಲೆಡೆ ಜಾಲ ಹರಡಲಾಗಿದೆ ಎಂದು ಮುಂಬೈ ಪೊಲೀಸ್ ಜಂಟಿ ಕಮೀಷನರ್ ರಾಕೇಶ್ ಮಾರಿಯಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಉತ್ತರಪ್ರದೇಶದ ಅಜಾಮ್‌ನಗರದಲ್ಲಿ ಮುಂಬೈ ಅಪರಾಧ ಪತ್ತೆ ದಳ ಮತ್ತು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ಜಂಟಿಯಾಗಿ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ಅವರು ಹೇಳಿದರು.
ಎರಡು ವಾರಗಳ ಹಿಂದಷ್ಟೇ ಮುಂಬೈ ಪೊಲೀಸರು ಸೆರೆ ಹಿಡಿದ ಇಂಡಿಯನ್ ಮುಜಾಹಿದ್ದೀನ್ ಶಂಕಿತ ಉಗ್ರರು ನೀಡಿದ ಮಾಹಿತಿಯ ಮೇರೆಗೆ, ಅಬು ರಶೀದ್‌ನ ಪತ್ತೆಗಾಗಿ ಜಾಲ ಬೀಸಿರುವುದಾಗಿ ಅವರು ತಿಳಿಸಿದರು. |