ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾನು ಸಾಯುವವರೆಗೂ ಎಡಪಂಥೀಯ:ಚಟರ್ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನು ಸಾಯುವವರೆಗೂ ಎಡಪಂಥೀಯ:ಚಟರ್ಜಿ
PTI
ನಾನು ಸಾಯುವವರೆಗೂ ಎಡಪಂಥೀಯನಾಗಿಯೇ ಇರುತ್ತೇನೆ ಎಂದು ಲೋಕಸಭೆಯ ಸ್ಪೀಕರ್ ಸೋಮನಾಥ್ ಚಟರ್ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಉಚ್ಚಾಟಿಸಿರುವ ಬಗ್ಗೆ ಇಂದಿಗೂ ಬೇಸರವಾಗುತ್ತದೆ. ಇವತ್ತೂ ನಾನು ನಮ್ಮ ಪಕ್ಷದ ನಾಯಕರನ್ನು ಕಾಮ್ರೇಡ್‌ಗಳೆಂದೇ ತಿಳಿಯುತ್ತೇನೆ. ಆದರೆ, ನನ್ನನ್ನು ಅವರು ಹಾಗೆ ನೋಡುತ್ತಿಲ್ಲ.

ಅದೇ ನನ್ನನ್ನು ಚಿಂತೆಗೀಡು ಮಾಡುತ್ತದೆ. ನನ್ನನವರು ತಪ್ಪು ತಿಳಿದುಕೊಂಡಿದ್ದಾರೆ ಎಂದು ಲೋಕಸಭಾ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಬೇಗುದಿಯನ್ನು ತೋಡಿಕೊಂಡಿದ್ದಾರೆ.

ಭಾರತ ಮತ್ತು ಅಮೆರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ,ಯುಪಿಎ ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ವಾಪಸು ಪಡೆದ ಬಳಿಕ,ಸ್ಪೀಕರ್ ಹುದ್ದೆಯಲ್ಲಿದ್ದ ಸಿಪಿಐಎಂನ ಚಟರ್ಜಿಯವರೂ ಕೂಡ ರಾಜೀನಾಮೆ ನೀಡಬೇಕೆಂದು ಪಾಲಿಟ್ ಬ್ಯೂರೋ ಸೂಚನೆ ನೀಡಿತ್ತು.

ಆದರೆ ಲೋಕಸಭಾ ಸ್ಪೀಕರ್ ಆಗಿರುವ ತಾನು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ, ಆ ಹಿನ್ನೆಲೆಯಲ್ಲಿ ತಾನು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಚಟರ್ಜಿ ತಿಳಿಸಿದ್ದರು. ಇದಾದ ಬಳಿಕ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾಳಾ ಠಾಕ್ರೆ ವಿರುದ್ಧ ದೂರು ವಾಪಸ್:ಭುಜಬಲ್
ಮತ್ತೆ ಕಾಳಗ:ಬಿಎಸ್‌ಎಫ್ ಗುಂಡಿಗೆ ಉಗ್ರ ಬಲಿ
ಯುಪಿ:ಉಗ್ರ ಅಬು ರಶೀದ್‌ಗಾಗಿ ತೀವ್ರ ಶೋಧ
ಭಯೋತ್ಪಾದಕರು ದೇಶದ ಶತ್ರುಗಳು: ಸೋನಿಯಾ
ಕಾಲ್ತುಳಿತ ಪ್ರಕರಣ:ಮೃತರ ಸಂಖ್ಯೆ 224ಕ್ಕೆ ಏರಿಕೆ
ಇಂದಿನಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಜಾರಿ