ಸೇನೆಯಲ್ಲಿ ನೂತನ ಹುದ್ದೆಗಳ ಆಯ್ಕೆಗೆ ಸಂಬಂಧಿಸಿದಂತೆ ಅಜಯ್ ವಿಕ್ರಮ್ ಸಿಂಗ್ ಸಮಿತಿ ನೀಡಿದ್ದ ಎರಡನೇ ಹಂತದ ವರದಿಯ ಅನುಷ್ಠಾನಕ್ಕೆ ಶುಕ್ರವಾರ ಕೇಂದ್ರದ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ವರದಿಯನ್ವಯ ಸೇನಾ ಜನರಲ್‌ಗಳ 2ಮತ್ತು 3ನೇ ಸ್ಟಾರ್‌ಗಳ 140ಹೊಸ ಹುದ್ದೆ ಮತ್ತು ಸೇನೆಯ ಮೂರು ವಿಭಾಗಗಳ ಬ್ರಿಗೇಡಿಯರ್, ಕರ್ನಲ್ ರಾಂಕಿನ ಸುಮಾರು 1,756ಹುದ್ದೆಗಳಿಗಾಗಿ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಆರ್ಮಿಗಾಗಿ 1,051 ಹೊಸ ಹುದ್ದೆಗಾಗಿ ಅನುಮೋದನೆ ನೀಡಿರುವ ಕ್ಯಾಬಿನೆಟ್, ಇದರಲ್ಲಿ 20ಲೆಫ್ಟಿನೆಂಟ್ ಜನರಲ್,75ಮೇಜರ್ ಜನರಲ್ ಮತ್ತು 222 ಬ್ರಿಗೇಡಿಯರ್ಸ್. ನೇವಿ(ನೌಕಾಪಡೆ)ಯಲ್ಲಿ, 342ಹೊಸ ಹುದ್ದೆಗಳಿದ್ದು, ಇದರಲ್ಲಿ 4ಸಹಾಯಕ ಅಡ್ಮಿರಲ್ಸ್, 14 ರೇರ್ ಅಡ್ಮಿರಲ್ಸ್ ಮತ್ತು 324 ಕ್ಯಾಪ್ಟನ್ ಮತ್ತು ಕಮಾಂಡರ್ಸ್.
ಅದೇ ರೀತಿ ಏರ್ ಫೋರ್ಸ್(ವೈಮಾನಿಕದಳ)ನಲ್ಲಿ 503ನೂತನ ಹುದ್ದೆಗಳಿದ್ದು,ಇದರಲ್ಲಿ 6ಮಂದಿ ಏರ್ ಮಾರ್ಷಲ್ಸ್,21ಸಹಾಯಕ ಏರ್ ಮಾರ್ಷಲ್ಸ್,61ಏರ್ ಕಮಾಂಡರ್ಸ್ ಮತ್ತು 415 ಗ್ರೂಪ್ ಕ್ಯಾಪ್ಟನ್ಸ್.
ಅಲ್ಲದೇ 20 ಲೆಫ್ಟಿನೆಂಟ್ ಜನರಲ್ಸ್ ಸೇರಿದಂತೆ 30ಹೊಸ ತ್ರಿ ಸ್ಟಾರ್ ಜನರಲ್ಸ್,6ಏರ್ ಮಾರ್ಷಲ್ಸ್ ಮತ್ತು 4ಸಹಾಯಕ ಅಡ್ಮಿರಲ್ಸ್.2ಸ್ಟಾರ್ ಜನರಲ್ಸ್ 110ಹುದ್ದೆಗಳಿವೆ.ಇದರಲ್ಲಿ 75ಮೇಜರ್ ಜನರಲ್ಸ್, 21ಸಹಾಯಕ ಮಾರ್ಷಲ್ಸ್ ಮತ್ತು 14 ವರಿಷ್ಠ ಆಡ್ಮಿರಲ್.
ಸೇನಾ ಹುದ್ದೆಗಳಿಗಾಗಿ ನೇಮಕಾತಿಗೆ ಸಂಬಂಧಿಸಿದಂತೆ ಪ್ರಥಮ ಹಂತದ ವರದಿಯನ್ನು 2004ರ ಡಿಸೆಂಬರ್‌ನಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. |