ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜಧಾನಿಯಲ್ಲಿ ‘ನಯೀ ದುನಿಯಾ’
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಧಾನಿಯಲ್ಲಿ ‘ನಯೀ ದುನಿಯಾ’
ವೆಬ್‌ದುನಿಯಾದ ಮಾತೃಸಂಸ್ಥೆಯಾದ ನಯೀ ದುನಿಯಾ ಪತ್ರಿಕೆಯ ರಾಜಧಾನಿ ಆವೃತ್ತಿ ಹಾಗೂ ಭಾನುವಾರದ ನಿಯತಕಾಲಿಕವು ನವದೆಹಲಿಯಲ್ಲಿ ಬುಧವಾರ ಅದ್ದೂರಿಯಿಂದ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಸಾಮಾಜಿಕ, ರಾಜಕೀಯ, ಮನರಂಜನೆ, ಸಾಹಿತ್ಯ, ಸರಕಾರೀ ಸೇವೆ ಮತ್ತು ಕ್ರೀಡಾಕ್ಷೇತ್ರದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಶುಭ ಕೋರಿದರು.

ಪ್ರಖ್ಯಾತ ಕವಿ ಗುಲ್ಜಾರ್, ಬರಹಗಾರ ಜಾವೇದ್ ಅಖ್ತರ್, ಶಾಸ್ತ್ರೀಯ ಸಂಗೀತಕ್ಕೆ ಹೊಸ ಆಯಾಮ ನೀಡಿದ ಗಾಯಕಿ ಶುಭಾ ಮುದ್ಗಲ್, ಒಲಿಂಪಿಕ್ ಬಾಕ್ಸಿಂಗ್ ತಾರೆ ಸುಶೀಲ್ ಕುಮಾರ್, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಮಹಿಳೆ ಅರುಣಾ ರಾಯ್, ಸಂದೀಪ್ ಪಾಂಡೆ ಹಾಗೂ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಾಮಾಜಿಕ ಕಾರ್ಯಕರ್ತರು ರಾಜಧಾನಿಯಿಂದ ಪ್ರಕಟವಾಗಲಿರುವ ನಯೀದುನಿಯಾ ಪತ್ರಿಕೆಯ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.

ಕೇಂದ್ರ ಸಚಿವರು, ಹಿರಿಯ ರಾಜಕೀಯ ಮುಖಂಡರು, ಕೈಗಾರಿಕೋದ್ಯಮಿಗಳು ಮತ್ತು ಇತರ ಗಣ್ಯರು ಹಾಜರಿದ್ದು, ಮಧ್ಯ ಭಾರತದ (ಮಧ್ಯಪ್ರದೇಶ, ಛತ್ತೀಸ್‌ಗಢ) ಅತ್ಯಂತ ಜನಪ್ರಿಯ ಪತ್ರಿಕೆ ‘ನಯೀದುನಿಯಾ’ ರಾಜಧಾನಿಯಿಂದ ಹೊಸ ಅಲೆಗಳನ್ನು ಎಬ್ಬಿಸಲು ಆರಂಭಿಸಿರುವುದನ್ನು ಶ್ಲಾಘಿಸಿದರು.

ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶದವರಲ್ಲದೆ, ಉತ್ತರ ಭಾರತದಿಂದ ಆಗಮಿಸಿದ ಜನರೂ ಈ ಅಮೂಲ್ಯ ಕ್ಷಣಗಳಿಗಾಗಿ ಕಾತರದಿಂದ ಕಾಯುತ್ತಿದ್ದರು. ಇದು 21ನೇ ಶತಮಾನದಲ್ಲಿ ಹಿಂದಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವೊಂದು ಸೇರ್ಪಡೆಯಾದ ದಿನವಾಗಿದೆ ಎಂದು ಅತಿಥಿಗಳು ಕೊಂಡಾಡಿದರು.

ಉಪಸ್ಥಿತರಿದ್ದ ಗಣ್ಯರು ನಯೀದುನಿಯಾದ ಸಾಧನೆಗಳು ಮತ್ತು ಹಿಂದಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅದು ನೀಡಿದ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಎಲ್ಲ ಒತ್ತಡಗಳು, ಬದ್ಧತೆಗಳನ್ನು ಮೀರಿ ನಿಷ್ಪಕ್ಷಪಾತ ಪತ್ರಿಕೋದ್ಯಮವು ದೇಶಕ್ಕೆ ಮತ್ತು ಸಮಾಜಕ್ಕೆ ಹೊಸ ಆಯಾಮ ನೀಡಲಿ ಎಂದವರು ಹಾರೈಸಿದರು.

ದೆಹಲಿಯಲ್ಲಿ ಸಿನಿಮಾ ಮತ್ತು ದೂರದರ್ಶನ ಮಾಧ್ಯಮಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಬೇಕಾದ ಅಗತ್ಯವಿದೆ. ಅದು ಮಾರುಕಟ್ಟೆಗಳ ಅವಶ್ಯಕತೆಯನ್ನು ಅರಿತುಕೊಂಡು ಸಾಮಾಜಿಕ ಕರ್ತವ್ಯ ನಿಭಾಯಿಸಿ, ಅವುಗಳ ನಡುವೆ ಕ್ರಿಯಾಶೀಲ ಸಮತೋಲನ ಕಾಯ್ದುಕೊಳ್ಳಬೇಕಿದೆ ಮತ್ತು ನಯೀದುನಿಯಾವು ಅದನ್ನು ಈಡೇರಿಸಲಿ ಎಂದು ಅವರು ಆಶಿಸಿದರು.

ನಯೀ ದುನಿಯಾ ಮಾಧ್ಯಮ ಸಮೂಹದ ಮುಖ್ಯಸ್ಥ ಅಭಯ್ ಛಜಿಲಾನಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿನಯ್ ಛಜಿಲಾನಿ, ನಿರ್ದೇಶಕ ವಿನೀತ್ ಸೇಥಿಯಾ, ಮುಖ್ಯ ಸಂಪಾದಕರ ಅಲೋಕ್ ಮೆಹ್ತಾ, ವೆಬ್‌ದುನಿಯಾ ಸಂಪಾದಕ ಜೈದೀಪ್ ಕಾರ್ಣಿಕ್, ಸಂಡೇ ನಯೀದುನಿಯಾ ಸಂಪಾದಕ ವಿಷ್ಣು ನಗರ್ ಮತ್ತು ನಯೀದುನಿಯಾ ಕುಟುಂಬ ಹಲವು ಹಿರಿಯ ಅಧಿಕಾರಿಗಳು ಅತಿಥಿಗಳನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಇಒ ವಿನಯ್ ಛಜಿಲಾನಿ, ಯಾವತ್ತಿನಂತೆಯೇ ನಯೀದುನಿಯಾವು ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಬದ್ಧವಾಗಿರುತ್ತದೆ ಮತ್ತು ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಂತೆ, ನಯೀದುನಿಯಾವು ದೆಹಲಿ ಹಾಗೂ ಉತ್ತರ ಭಾರತದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು. ಇದು ನಯೀದುನಿಯಾದ ಯಾನದಲ್ಲಿ ಅತ್ಯಂತ ಮಹತ್ವದ ನಿಲ್ದಾಣವಾಗಿದ್ದು, ಇಲ್ಲಿಂದ ಅದು ರಾಷ್ಟ್ರವಿಡೀ ಪಸರಿಸುತ್ತದೆ ಎಂದು ಅವರು ಹೇಳಿದರು.

ಸಾಮಾಜಿಕ ಕರ್ತವ್ಯ ಮತ್ತು ಸಂಪ್ರದಾಯ ನಿಭಾವಣೆಯ ಅಡಿಪಾಯವನ್ನು ಮರಳಿ ತರುವುದು ನಯೀದುನಿಯಾದ ಪ್ರಯತ್ನ ಎಂದ ಅವರು, ಯುವಜನಾಂಗದ ಆಶೋತ್ತರಗಳಿಗೆ, ಅವಶ್ಯಕತೆಗಳಿಗೆ ಸ್ಪಂದಿಸುತ್ತದೆ ಎಂದೂ ಭರವಸೆ ನೀಡಿದರು.

ಮುಖ್ಯ ಸಂಪಾದಕ ಅಲೋಕ್ ಮೆಹ್ತಾ ಅವರು ಮಾತನಾಡಿ, ರಾಷ್ಟ್ರ ರಾಜಧಾನಿ ಆವೃತ್ತಿಯ ಪ್ರಕಟಣೆಯೊಂದಿಗೆ, ಸಂಡೇ ನಯೀದುನಿಯಾವು ಲಖ್ನೋ, ಪಟ್ನಾ, ರಾಂಚಿ, ಭೋಪಾಲ್, ಜೈಪುರ, ರಾಯಪುರ, ಡೆಹ್ರಾಡೂನ್, ಚಂಡೀಗಢ, ಮುಂಬಯಿ, ಕೋಲ್ಕತಾ ಮತ್ತು ಗುವಾಹಟಿಗಳಿಂದಲೂ ಪ್ರಕಟಣೆಗೊಳ್ಳಲಿದೆ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕ್ಯಾಬಿನೆಟ್‌ನಿಂದ ಸೇನೆಯ 1900ಹುದ್ದೆಗೆ ಅಂಕಿತ
ನಾನು ಸಾಯುವವರೆಗೂ ಎಡಪಂಥೀಯ:ಚಟರ್ಜಿ
ಬಾಳಾ ಠಾಕ್ರೆ ವಿರುದ್ಧ ದೂರು ವಾಪಸ್:ಭುಜಬಲ್
ಮತ್ತೆ ಕಾಳಗ:ಬಿಎಸ್‌ಎಫ್ ಗುಂಡಿಗೆ ಉಗ್ರ ಬಲಿ
ಯುಪಿ:ಉಗ್ರ ಅಬು ರಶೀದ್‌ಗಾಗಿ ತೀವ್ರ ಶೋಧ
ಭಯೋತ್ಪಾದಕರು ದೇಶದ ಶತ್ರುಗಳು: ಸೋನಿಯಾ