ಯುಪಿಎ ಸರಕಾರ ದೇಶದ ಸಾರ್ವಭೌಮತೆಯೊಂದಿಗೆ ರಾಜಿ ಮಾಡಿಕೊಂಡಿದೆ ಎಂಬ ವಿರೋಧ ಪಕ್ಷ ಬಿಜೆಪಿಯ ಆರೋಪವನ್ನು ತಳ್ಳಿಹಾಕಿರುವ ಶಿನಸೇನಾ ಮುಖ್ಯಸ್ಥ ಬಾಳಾ ಠಾಕ್ರೆ, ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಒಪ್ಪಂದವು 'ಐತಿಹಾಸಿಕ' ಎಂದು ಬಣ್ಣಿಸಿದ್ದಾರೆ.ಅಣು ಒಪ್ಪಂದದ ಕುರಿತಾದ ರಾಜಕೀಯ ಟೀಕೆಗಳಲ್ಲಿ ಸತ್ಯಾಂಶವಿದೆ ಎಂದು ನನಗನಿಸುವುದಿಲ್ಲ. ನಮ್ಮ ಸರಕಾರವೇ ಪರಮಾಣು ಪರೀಕ್ಷೆ ನಡೆಸದಂತೆ ಸ್ವಯಂಪ್ರೇರಿತ ತಾತ್ಕಾಲಿಕ ನಿಷೇಧ ಹೇರಿದೆ ಎಂದು ಠಾಕ್ರೆ ಅಭಿಪ್ರಾಯಪಟ್ಟರು.ಈ ಐತಿಹಾಸಿಕ ಒಪ್ಪಂದದಿಂದ ಕಾಂಗ್ರೆಸ್ ಮತ್ತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಯಾವುದೇ ರಾಜಕೀಯ ಲಾಭವನ್ನು ಪಡೆದುಕೊಳ್ಳುತ್ತಾರೆಯೇ ಎಂಬುದನ್ನು ಮತದಾರರೇ ನಿರ್ಧರಿಸಬೇಕು ಎಂದು ಅವರು ತಿಳಿಸಿದರು.ಭಾರತಕ್ಕೆ ದೊರೆತ ಎನ್ಎಸ್‌ಜಿ ವಿನಾಯ್ತಿಯಿಂದ, ಭಾರತವು ರಿಯಾಕ್ಟರ್ ಮತ್ತು ಪರಮಾಣು ತಂತ್ರಜ್ಞಾನವನ್ನು ಸಂಗ್ರಹಿಸಿ, ದೇಶದ ಇಂಧನ ಕೊರತೆಯನ್ನು ನಿವಾರಿಸಬಹುದು. ಎನ್ಎಸ್‌ಜಿ ರಿಯಾಯ್ತಿಯಿಂದ ಭಾರತವು ಸದಸ್ಯ ರಾಷ್ಟ್ರಗಳೊಂದಿಗೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಬಹುದಾಗಿದೆ ಎಂದು ಅವರು ಹೇಳಿದರು.ಅಣು ಒಪ್ಪಂದ ಜಾರಿಗೊಳಿಸುವಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಪಾತ್ರವನ್ನು ಶ್ಲಾಘಿಸಿದ ಅವರು, ಮನಮೋಹನ್ ಸಿಂಗ್ ಒಪ್ಪಂದದ ವಿಚಾರದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ ಎಂದರು. |
ಸಂಬಂಧಿತ ಮಾಹಿತಿ ಹುಡುಕಿ |
|