ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೆನೆಪದರ: ಆದಾಯ ಮಿತಿ 4.5ಲಕ್ಷಕ್ಕೆ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆನೆಪದರ: ಆದಾಯ ಮಿತಿ 4.5ಲಕ್ಷಕ್ಕೆ ಏರಿಕೆ
ಕೆನೆ ಪದರಕ್ಕೆ ಸೇರುವ ಇತರೆ ಹಿಂದುಳಿದ ವರ್ಗದವರಿಗೆ ವಾರ್ಷಿಕ ಆದಾಯ ಮಿತಿಯನ್ನು 2.5ಲಕ್ಷ ರೂಪಾಯಿಗಳಿಂದ 4.5ಲಕ್ಷಕ್ಕೆ ಏರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಮೀಸಲಾತಿ ವಲಯದಲ್ಲಿ ಇತರೆ ಹಿಂದುಳಿದ ವರ್ಗಗಳ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಳ್ಳಲಿದೆ.

ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಶೀಘ್ರವೇ ಈ ಕುರಿತ ಸರ್ಕಾರಿ ಆದೇಶ ಹೊರಬೀಳಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ವಾರ್ತಾ ಸಚಿವ ಪ್ರಿಯರಂಜನ್ ದಾಸ್ ಮುನ್ಶಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಶಿಫಾರಸಿನ ಮೇರೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಈ ಪ್ರಸ್ತಾಪವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿತ್ತು.

ಈ ಬಗ್ಗೆ ಬುಡಕಟ್ಟು ವ್ಯವಹಾರಗಳು,ಗೃಹ,ಸಿಬ್ಬಂದಿ ಮತ್ತು ತರಬೇತಿ , ಕಾನೂನು, ಮಾನವ ಸಂಪನ್ಮೂಲ ಹಾಗೂ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರುಗಳು ಆಂತರಿಕ ಮಟ್ಟದಲ್ಲಿ ಚರ್ಚೆ ನಡೆಸಿದರು.

ಶೀಘ್ರದಲ್ಲೇ ನಡೆಯಲಿರುವ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹಾಗೂ ಮುಂದಿನ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಣು ಒಪ್ಪಂದ 'ಐತಿಹಾಸಿಕ':ಬಾಳಾ ಠಾಕ್ರೆ
ಒರಿಸ್ಸಾ ಹಿಂಸಾಕಾಂಡ: ಮತ್ತಿಬ್ಬರ ಹತ್ಯೆ
ರಾಜಧಾನಿಯಲ್ಲಿ ‘ನಯೀ ದುನಿಯಾ’
ಕ್ಯಾಬಿನೆಟ್‌ನಿಂದ ಸೇನೆಯ 1900ಹುದ್ದೆಗೆ ಅಂಕಿತ
ನಾನು ಸಾಯುವವರೆಗೂ ಎಡಪಂಥೀಯ:ಚಟರ್ಜಿ
ಬಾಳಾ ಠಾಕ್ರೆ ವಿರುದ್ಧ ದೂರು ವಾಪಸ್:ಭುಜಬಲ್