ಗುಜರಾತ್‌ನ ಸೂರತ್‌ನಲ್ಲಿ 1993ರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಮೊಹಮ್ಮದ್ ಸುರ್ತಿಯನ್ನು ನ್ಯಾಯಾಲಯ ಶನಿವಾರ ದೋಷಿ ಎಂದು ತೀರ್ಪು ನೀಡಿದ್ದು,20ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ.
1993ರಲ್ಲಿ ಸೂರತ್ ರೈಲ್ವೆ ಸ್ಟೇಶನ್‌ನಲ್ಲಿ ಹಾಗೂ ವಾರ್ಚಾ ಪ್ರದೇಶದಲ್ಲಿನ ಸಾಧನಾ ಶಾಲೆಯ ಸಮೀಪ ಸಂಭವಿಸಿದ ಗ್ರೆನೇಡ್ ಸ್ಫೋಟ ಸಂಭವಸಿದ ಪ್ರಕರಣದ ಕುರಿತಂತೆ ವಿಶೇಷ ಟಾಡಾ ನ್ಯಾಯಾಲಯ ಶನಿವಾರ ಸುರ್ತಿ ಸೇರಿದಂತೆ 11ಮಂದಿಯನ್ನು ದೋಷಿ ಎಂದು ತೀರ್ಪು ನೀಡಿದೆ.
ನಾಲ್ಕು ಆರೋಪಿತರಿಗೆ ತಲಾ 20ವರ್ಷಗಳಂತೆ ಜೈಲು ಶಿಕ್ಷೆ ವಿಧಿಸಿದ್ದ ನ್ಯಾಯಪೀಠ, ಉಳಿದ ಆರೋಪಿತರಿಗೆ ಶಿಕ್ಷೆಯ ಪ್ರಮಾಣವನ್ನು ಶೀಘ್ರವೇ ಘೋಷಿಸುವುದಾಗಿ ತಿಳಿಸಿದೆ.
ಅಲ್ಲದೇ ಏಳು ಮಂದಿಯನ್ನು ಖುಲಾಸೆಗೊಳಿಸಿದ್ದು, ಯಾವುದೇ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
1993ರಲ್ಲಿ ಗುಜರಾತ್‌ನ ವಾಣಿಜ್ಯ ನಗರದಲ್ಲಿ ಗ್ರೆನೇಡ್ ಸ್ಫೋಟ ಸಂಭವಿಸಿದ್ದು, ಇದರಲ್ಲಿ 38ಮಂದಿ ಗಾಯಗೊಂಡಿದ್ದರು.ಈ ಘಟನೆಯ ಒಂದು ತಿಂಗಳ ಬಳಿಕ ಮುಂಬೈ ವಾಣಿಜ್ಯ ನಗರಿಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. |