ರಾಜಧಾನಿಯಲ್ಲಿ ಸೆ.13ರಂದು ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ 5 ಉಗ್ರರಿಗೆ ಶನಿವಾರ ಇಲ್ಲಿನ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು,12ದಿನಗಳ ಪೊಲೀಸ್ ಬಂಧನ ವಿಧಿಸಿದೆ.
ಬಂಧಿತ ಆರೋಪಿತರಾದ ಮೊಹಮ್ಮದ್ ಸೈಫ್, ಜಿಶಾನ್, ಮೊಹಮ್ಮದ್ ಶಕೀಲ್, ಜಿಯಾ ಉರ್ ರೆಹಮಾನ್ ಮತ್ತು ಸಾಕಿಬ್ ನಿಸ್ಸಾರ್ ಸೇರಿದಂತೆ ಐವರನ್ನು ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಸಂಜೀವ್ ಜೈನ್ ಅವರ ಮುಂದೆ ಹಾಜರುಪಡಿಸಿದ್ದು,ಶಂಕಿತ ಉಗ್ರರನ್ನು ಅಕ್ಟೋಬರ್ 16ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.
ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿ ಸೆಪ್ಟೆಂಬರ್ 19ರಂದು ನಡೆದ ಎನ್‌ಕೌಂಟರ್ ಸಂದರ್ಭದಲ್ಲಿಯೇ ಮೊಹಮ್ಮದ್ ಸೈಫ್‌ನನ್ನು ಬಂಧಿಸಲಾಗಿತ್ತು. ಬಳಿಕ ಅದೇ ದಿನ ಸಂಜೆ ಜಿಶಾನ್‌ನನ್ನು ಸೆರೆ ಹಿಡಿಯಲಾಗಿತ್ತು.
ಒಂದು ದಿನದ ನಂತರ ಮೊಹಮ್ಮದ್ ಶಕೀಲ್, ಜಿಯಾ ಉರ್ ರೆಹಮಾನ್ ಮತ್ತು ಸಾಕಿಬ್ ನಿಸ್ಸಾರ್‌ನನ್ನು ದಕ್ಷಿಣ ದೆಹಲಿಯಲ್ಲಿ ಬಂಧಿಸಲಾಗಿತ್ತು. |