ಇಲ್ಲಿನ ಬೋಡೊಸ್ ಹಾಗೂ ಅಕ್ರಮವಾಗಿ ವಲಸೆ ಬಂದ ಬಾಂಗ್ಲಾ ನಿವಾಸಿಗಳ ನಡುವೆ ಶನಿವಾರ ಸಂಭವಿಸಿದ ಘರ್ಷಣೆಯಲ್ಲಿ ಸುಮಾರು 16 ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಬೋಡೊ ಮತ್ತು ಬಾಂಗ್ಲಾದೇಶಿಯರ ನಡುವೆ ನಡೆದ ಹಿಂಸಾಚಾರದಲ್ಲಿ 14ಮಂದಿ ಸಾವನ್ನಪ್ಪಿದ್ದರೆ, ಪೊಲೀಸ್ ಗೋಲಿಬಾರ್‌ಗೆ ಇಬ್ಬರು ಬಲಿಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಾರ್ಜ್ ಬಾಸುಮಾತ್ರಿ ಅವರನ್ನು ವರ್ಗಾವಣೆ ಮಾಡಿದ್ದು,ಪೊಲೀಸ್ ವರಿಷ್ಠಾಧಿಕಾರಿ ಅನುಪ್ ಕುಮಾರ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇಲ್ಲಿನ ಸೋನಾರಿಪಾರಾ ಮತ್ತು ಜಾರ್ಗಾನ್ ಪ್ರದೇಶದಲ್ಲಿ ಸುಮಾರು ಎಂಟು ಸುಟ್ಟ ಬೋಡೊ ಜನಾಂಗದ ದೇಹಗಳು ದೊರೆತಿದ್ದು,ಬಳಿಕ ಹೊತ್ತಿಕೊಂಡ ಹಿಂಸಾಚಾರದಲ್ಲಿ ವಲಸಿಗ ಬಾಂಗ್ಲಾದೇಶಿಯರ ವಿರುದ್ಧ ಘರ್ಷಣೆಗೆ ಇಳಿದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. |