ಒರಿಸ್ಸಾದ ಕಂಧಮಾಲ್‌ನಲ್ಲಿ ವಿಶ್ವಹಿಂದೂ ಪರಿಷತ್‌ನ ಸ್ವಾಮಿ ಲಕ್ಷ್ಮಣಾನಂದ ಅವರನ್ನು ಆಗೋಸ್ಟ್ 23ರಂದು ಹತ್ಯೆಗೈದಿರುವುದು ತಾವೇ ಎಂಬುದಾಗಿ ಒರಿಸ್ಸಾದ ಸಿಪಿಐಎಂನ ರಾಜ್ಯ ಸಮಿತಿ ಶನಿವಾರದಂದು ಪುನರುಚ್ಚರಿಸಿದೆ.
ವಿಎಚ್‌ಪಿಯ ಸ್ವಾಮಿ ಲಕ್ಷ್ಮಣಾನಂದ ಅವರ ಹತ್ಯೆಯ ಬಳಿಕ ಕಂಧಮಾಲ್ ಸೇರಿದಂತೆ ರಾಜ್ಯಾದ್ಯಂತ ಕೋಮುದಳ್ಳುರಿ ಹೊತ್ತಿ ಉರಿಯುತ್ತಿದ್ದು,ಇದಕ್ಕೆ ಕ್ರೈಸ್ತ ಸಂಘಟನೆಗಳೇ ಕಾರಣ ಎಂದು ಆರೋಪಿಸಿರುವ ಸಂಘಪರಿವಾರ, ತೀವ್ರ ದಾಳಿಗೆ ಮುಂದಾಗಿರುವುದನ್ನು ಗಮನಿಸಿದ ಸಿಪಿಐಎಂ ಈ ಮೊದಲೇ ಸ್ವಾಮಿ ಹತ್ಯೆ ಹೊಣೆ ಹೊತ್ತು ಪ್ರಕಟಣೆ ನೀಡಿತ್ತು.
ಕಂಧಮಾಲ್ ಜಿಲ್ಲೆಯ ದಲಿತ ಕ್ರಿಶ್ಚಿಯನ್ ಹಾಗೂ ಬುಡಕಟ್ಟು ಜನಾಂಗದವರನ್ನು ಬಲವಂತವಾಗಿ ಹಿಂದೂಧರ್ಮಕ್ಕೆ ಮತಾಂತರಿಸುತ್ತಿದ್ದುದರಿಂದ ಸ್ವಾಮಿ ಲಕ್ಷ್ಮಣಾನಂದ ಅವರನ್ನು ಹತ್ಯೆಗೈದಿರುವುದಾಗಿ ಭುವನೇಶ್ವರ ಅರಣ್ಯಪ್ರದೇಶದ ರಹಸ್ಯ ಸ್ಥಳವೊಂದರಲ್ಲಿ ದಿ ಹಿಂದೂ ಪತ್ರಿಕೆಗೆ ಸಿಪಿಐಎಂನ ವಕ್ತಾರ ಸವ್ಯಸಾಚಿ ಪಾಂಡಾ ಆಲಿಯಾಸ್ ಸುನಿಲ್ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
2007 ಡಿಸೆಂಬರ್ ತಿಂಗಳಲ್ಲಿ ಸ್ವಾಮಿ ಹಾಗೂ ಆತನ ಸಂಗಡಿಗರಿಗೆ ಮುನ್ನೆಚ್ಚರಿಕೆ ನೀಡಲಾಗಿತ್ತು, ಬುಡಕಟ್ಟು ಜನಾಂಗದವರನ್ನು ಬಲವಂತದಿಂದ ಮತಾಂತರ ಮಾಡುವ ಕಾರ್ಯಕ್ಕೆ ಮುಂದಾದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು.ಆದರೆ ಅವರು ಅದನ್ನು ಲೆಕ್ಕಿಸದೆ ಇದ್ದಿರುವುದರಿಂದ ಈ ಕೃತ್ಯ ಎಸಗಬೇಕಾಯಿತು ಎಂದು ಹೇಳಿದ್ದಾರೆ.
ಆದರೆ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ವಿರುದ್ಧ ನಡೆಯುತ್ತಿರುವ ಹಿಂಸಾಚಾರಕ್ಕೆ ಸಿಪಿಐಎಂ ಹೊಣೆಯಲ್ಲ,ನಾವು ಈಗಾಗಲೇ ಎರಡು ಸ್ವಾಮಿ ಹತ್ಯೆಯ ಹೊಣೆ ಹೊತ್ತು ಎರಡು ಪತ್ರಗಳನ್ನು ಜಲ್ಸಾಪಾತಾದಲ್ಲಿ ಅಂಟಿಸಲಾಗಿತ್ತು. ಆದರೆ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸುನಿಲ್ ಆರೋಪಿಸಿದರು.
ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಿಎಚ್‌ಪಿ, ವಿಶ್ವಹಿಂದೂ ಪರಿಷತ್ ಹಾಗೂ ಬಿಜೆಪಿ ಹಿಂಸಾಚಾರದಲ್ಲಿ ತೊಡಗಿದ್ದು,ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ ಎಂದು ದೂರಿದ್ದಾರೆ. |