ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಂಘಪರಿವಾರ ವಿರುದ್ಧ ಕ್ರಮಕ್ಕೆ ಕಾರಟ್ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಘಪರಿವಾರ ವಿರುದ್ಧ ಕ್ರಮಕ್ಕೆ ಕಾರಟ್ ಆಗ್ರಹ
ಒರಿಸ್ಸಾ ಸೇರಿದಂತೆ ದೇಶದ ವಿವಿಧೆಡೆ ಕ್ರೈಸ್ತ ಸಮುದಾಯದ ಮೇಲೆ ದಾಳಿ ನಡೆಸುತ್ತಿರುವ ಸಂಘ ಪರಿವಾರದ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಸಿಪಿಐಎಂನ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆಗ್ರಹಿಸಿದ್ದಾರೆ.

ಇಲ್ಲಿ ನಡೆದ ರಾಜ್ಯ ಮಹಿಳಾ ಡೆಮೊಕ್ರೆಟಿಕ್ ಯೂತ್ ಫೆಡರೇಶನ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಯಾಕೆ ಒರಿಸ್ಸಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಕೋಮುಹಿಂಸಾಚಾರದ ಬಗ್ಗೆ ಕೇಂದ್ರದ ಆಡಳಿತರೂಢ ಯುಪಿಎ ಮೈತ್ರಿಕೂಟ ಮೃದುಧೋರಣೆ ತಳೆದಿರುವುದಾಗಿ ಕಾರಟ್ ಆರೋಪಿಸಿದರು.ಈ ಬೆಳವಣಿಗೆ ಬಗ್ಗೆ ಕೇಂದ್ರ ಯಾಕೆ ಮೌನವಹಿಸಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದು, ಈ ದಾಳಿಗಳಿಗೆ ಭಜರಂಗದಳವೇ ನೇರ ಹೊಣೆ ಎಂದು ಒತ್ತಿ ಹೇಳಿದರು.

ಅಲ್ಲದೇ ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದ ಬಗ್ಗೆಯೂ ಹರಿಹಾಯ್ದ ಕಾರಟ್, ಈ ಒಪ್ಪಂದದಿಂದ ನಿರಂತರವಾಗಿ ಪರಮಾಣು ಇಂಧನ ಸರಬರಾಜು ಆಗುತ್ತದೆ ಎಂಬ ಭರವಸೆ ಇಲ್ಲ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ವಾಮಿ ಲಕ್ಷ್ಮಣಾನಂದ ಹತ್ಯೆಗೆ ನಾವೇ ಹೊಣೆ:ಸಿಪಿಐ(ಎಂ)
ಅಸ್ಸಾಂ ಹಿಂಸಾಚಾರಕ್ಕೆ 16 ಬಲಿ
ದೆಹಲಿ ಸ್ಫೋಟ:ಶಂಕಿತ ಉಗ್ರರು ಪೊಲೀಸ್ ಕಸ್ಟಡಿಗೆ
ಒರಿಸ್ಸಾದಲ್ಲಿ ರಾಷ್ಟ್ರಪತಿ ಆಡಳಿತ ?
ಸೂರತ್ ಬ್ಲಾಸ್ಟ್: ಮಾಜಿ ಸಚಿವರಿಗೆ 20ವರ್ಷ ಜೈಲು
ಒರಿಸ್ಸಾ:ಅತ್ಯಾಚಾರ ಎಸಗಿ ಹಿಂದೂ ಯುವತಿಯ ದಹನ