ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನ್ಯಾನೋ ಕೈ ಜಾರಿದರೂ-ಸಮರ ಮುಂದುವರಿಕೆ:ಬುದ್ಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ ಕೈ ಜಾರಿದರೂ-ಸಮರ ಮುಂದುವರಿಕೆ:ಬುದ್ಧ
ಪಶ್ಚಿಮಬಂಗಾಳದಿಂದ ಟಾಟಾ ಮೋಟಾರ್ಸ ತಮ್ಮ ನ್ಯಾನೋ ಯೋಜನೆಯನ್ನು ಹಿಂತೆಗೆದುಕೊಂಡ ನಿಟ್ಟಿನಲ್ಲಿ ತಾವು ಕೇವಲ ಒಂದು ಯುದ್ದವನ್ನಷ್ಟೇ ಸೋತಿದ್ದೇವೆ. ಆದರೆ ಇದಕ್ಕಾಗಿರುವ ಹೋರಾಟವನ್ನು ನಿಲ್ಲಿಸಲಾರೆವು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯಜಿ ಕಟುವಾಗಿ ಹೇಳಿದ್ದಾರೆ.

ಪಶ್ಚಿಮಬಂಗಾಳದಲ್ಲಿ ತಮ್ಮ ಉದ್ಯಮವನ್ನು ಮುಂದುವರಿಸುವುದಕ್ಕೆ ಅನಿಶ್ಚಿತತೆ ಎದುರಾದ ಕಾರಣ ಕಳೆದ ಶುಕ್ರವಾರ ರತನ್ ಟಾಟಾ ಅವರು ಟಾಟಾದ ನ್ಯಾನೋ ಯೋಜನೆಯನ್ನು ಪಶ್ಚಿಮಬಂಗಾಳದಿಂದ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದರು.

ಇದಾದ ನಂತರ ಭಾನುವಾರ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಬುದ್ಧದೇವ್, ತಾವು ಕೇವಲ ಒಂದು ಸಮರವನ್ನು ಸೋತಿದ್ದರೂ,ಸಂಪೂರ್ಣ ಯುದ್ಧವನ್ನು ಸೋತಿಲ್ಲ ಎಂದು ತಿಳಿಸಿದ್ದಾರೆ.

ಪಶ್ಚಿಮಬಂಗಾಳದಿಂದ ಟಾಟಾ ತನ್ನ ಯೋಜನೆಯನ್ನು ಹಿಂತೆಗೆದುಕೊಂಡು ಇಡೀ ದೇಶವನ್ನೇ ಚಿಂತೆಗೀಡು ಮಾಡುವಂತೆ ಮಾಡಿದೆ ಎಂದು ಓರಿಯನ್ ಟೆಕ್‌‌ಸಿಟಿಗೆ ಶಿಲಾನ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಶ್ಮೀರದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿ
ಸಂಘಪರಿವಾರ ವಿರುದ್ಧ ಕ್ರಮಕ್ಕೆ ಕಾರಟ್ ಆಗ್ರಹ
ಸ್ವಾಮಿ ಲಕ್ಷ್ಮಣಾನಂದ ಹತ್ಯೆಗೆ ನಾವೇ ಹೊಣೆ:ಸಿಪಿಐ(ಎಂ)
ಅಸ್ಸಾಂ ಹಿಂಸಾಚಾರಕ್ಕೆ 16 ಬಲಿ
ದೆಹಲಿ ಸ್ಫೋಟ:ಶಂಕಿತ ಉಗ್ರರು ಪೊಲೀಸ್ ಕಸ್ಟಡಿಗೆ
ಒರಿಸ್ಸಾದಲ್ಲಿ ರಾಷ್ಟ್ರಪತಿ ಆಡಳಿತ ?