ಜಮ್ಮು-ಕಾಶ್ಮೀರ ನಗರದಿಂದ ಲಾಲ್ ಚೌಕ್‌ವರೆಗೆ ಪ್ರತ್ಯೇಕತವಾದಿಗಳು ಸೋಮವಾರಂದು ಮೆರವಣಿಗೆಯನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ಅಂಗವಾಗಿ ಕಣಿವೆ ಪ್ರದೇಶದಾದ್ಯಂತ ಹೇರಿದ್ದ ಕರ್ಫ್ಯೂ ಇಂದು ಕೂಡ ಮುಂದುವರಿದಿದೆ.
ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕತಾವಾದಿ ಹಿರಿಯ ಮುಖಂಡರನ್ನು ಈಗಾಗಲೇ ಬಂಧಿಸಲಾಗಿದ್ದು, ಇದರಲ್ಲಿ ಹುರಿಯತ್ ಕಾನ್ಫರೆನ್ಸ್‌ನ ಸೈಯದ್ ಅಲಿ ಗಿಲಾನಿ ಅವರು ಹೃದಯಬೇನೆಯಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದ ಕರ್ಫ್ಯೂ ಹೇರಿಕೆಯಲ್ಲಿ ಯಾವುದೇ ಸಡಿಲಿಕೆ ನೀಡಿಲ್ಲ, ಪರಿಸ್ಥಿತಿ ಉದ್ನಿಗ್ನಗೊಂಡಿದ್ದು ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಎಲ್ಲೆಡೆ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ಫ್ಯೂ ಹೇರಿಕೆಯಿಂದಾಗಿ ಯಾವುದೇ ಸ್ಥಳೀಯ ಪತ್ರಿಕೆಗಳು ದೊರೆಯಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದು, ಭಾನುವಾರ ಬೆಳಿಗ್ಗೆಯಿಂದ ಕಣಿವೆಯಾದ್ಯಂತ ಕರ್ಫ್ಯೂವನ್ನು ಹೇರಲಾಗಿತ್ತು. |