ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವೋಟಿಗಾಗಿ ನೋಟು ಹಗರಣ-ಅಮರ್‌‌ಗೆ ಕ್ಲೀನ್ ಚಿಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೋಟಿಗಾಗಿ ನೋಟು ಹಗರಣ-ಅಮರ್‌‌ಗೆ ಕ್ಲೀನ್ ಚಿಟ್
PTI
ಸಂಸತ್‌ನಲ್ಲಿ ನಡೆದ ವೋಟಿಗಾಗಿ ನೋಟು ಹಗರಣದ ಕುರಿತು ತನಿಖೆ ನಡೆಸಿದ ಸಂಸದೀಯ ಸಮಿತಿ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್‌‌ ಮತ್ತು ಕಾಂಗ್ರೆಸ್‌ನ ಅಹ್ಮದ್ ಪಟೇಲ್‌‌ಗೆ ಕ್ಲೀನ್ ಚಿಟ್ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ವೋಟಿಗಾಗಿ ನೋಟು ಹಗರಣದ ಕುರಿತು ಸಂಸದೀಯ ಸಮಿತಿ ತನಿಖೆ ನಡೆಸಿದ್ದು,ಈಗಾಗಲೇ ವರದಿ ಸಿದ್ದಗೊಂಡಿದ್ದು, ಈ ಬಗ್ಗೆ ಆಯೋಗ ಅಕ್ಟೋಬರ್ 17ರಂದು ಅಂತಿ ಸಭೆ ಸೇರಿ,ಅದೇ ದಿನ ವರದಿಯನ್ನು ಸಂಸತ್‌ಗೆ ಒಪ್ಪಿಸುವುದಾಗಿ ಹೇಳಿದೆ.

ವೋಟಿಗಾಗಿ ನೋಟು ಹಗರಣವನ್ನು ಸ್ವತಂತ್ರ ಏಜೆನ್ಸಿಯಿಂದ ತನಿಖೆ ನಡೆಸಬೇಕು ಎಂದು ಸಮಿತಿ ತಿಳಿಸಿದ್ದಲ್ಲದೆ ಮತ್ತು ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಜುಲೈ 22ರಂದು ಯುಪಿಎ ಮೈತ್ರಿಕೂಟದ ವಿಶ್ವಾಸಮತ ಯಾಚನೆ ವೇಳೆ ಮತ ಸೆಳೆಯಲು ಬಿಜೆಪಿ ಸಂಸದರನ್ನು ಹಣ ನೀಡಿ ಖರೀದಿಸಿರುವುದಾಗಿ ಸಮಾಜವಾದಿ ಪಕ್ಷದ ಅಮರ್ ಸಿಂಗ್ ವಿರುದ್ಧ ಗುರುತರವಾದ ಆರೋಪ ಮಾಡಲಾಗಿತ್ತು. ವಿಶ್ವಾಸಮತ ದಿನದಂದು ಸಂಸತ್‌ನಲ್ಲಿ ನೋಟಿನ ಕಂತೆಗಳನ್ನು ಪ್ರದರ್ಶಿಸಲಾಗಿತ್ತು.ಈ ಹಗರಣದ ಬಗ್ಗೆ ತನಿಖೆ ನಡೆಸಲು ಸಂಸದೀಯ ಸಮಿತಿಯನ್ನು ರಚಿಸಲಾಗಿತ್ತು.
PTI


ಭಾನುವಾರದಂದು ಸಮಿತಿ ಇತರ ಸದಸ್ಯರೊಂದಿಗೆ ಸೇರಿ ಸಂಸದೀಯ ಸಮಿತಿ ಅಧ್ಯಕ್ಷ ಕಿಶೋರ್ ಚಂದ್ರ ಡೆಯೋ ಅವರು ವರದಿಯನ್ನು ಅಂತಿಮಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.

ಈ ಹಗರಣದಲ್ಲಿ ಸಮಾಜವಾದಿ ಪಕ್ಷದ ಅಮರ್ ಸಿಂಗ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿ,ಕ್ಲೀನ್ ಚಿಟ್ ನೀಡಿದೆ.

ವೋಟಿಗಾಗಿ ನೋಟು ಹಗರಣದ ತನಿಖೆಗಾಗಿ ನೇಮಿಸಿದ್ದ ಸಮಿತಿಯಲ್ಲಿ ಏಳು ಮಂದಿ ಇದ್ದು, ಇದರಲ್ಲಿ ಬಿಜೆಪಿಯ ವಿಕೆ ಮಲೋತ್ರಾ,ಸಿಪಿಐಎಂನ ಮೊಹಮ್ಮದ್ ಸಲೀಂ ಹಾಗೂ ಬಿಎಸ್ಪಿಯ ರಾಜೀವ್ ವರ್ಮಾ ಕೂಡ ಸೇರಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಶ್ಮೀರ: 2ನೇ ದಿನ ಕರ್ಫ್ಯೂ ಮುಂದುವರಿಕೆ
ಮುಸ್ಲಿಮರಿಗಷ್ಟೇ ಏಕೆ ಉಗ್ರರ ಹಣೆಪಟ್ಟಿ:ಪವಾರ್
ನ್ಯಾನೋ ಕೈ ಜಾರಿದರೂ-ಸಮರ ಮುಂದುವರಿಕೆ:ಬುದ್ಧ
ಕಾಶ್ಮೀರದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿ
ಸಂಘಪರಿವಾರ ವಿರುದ್ಧ ಕ್ರಮಕ್ಕೆ ಕಾರಟ್ ಆಗ್ರಹ
ಸ್ವಾಮಿ ಲಕ್ಷ್ಮಣಾನಂದ ಹತ್ಯೆಗೆ ನಾವೇ ಹೊಣೆ:ಮಾವೋ